May 5, 2026
Tuesday, May 5, 2026
spot_img

ಪುರುಷರೇ ಇಲ್ಲಿ ನೋಡಿ, ದೇಹದ ಈ ಅಂಗಗಳ ಸ್ವಚ್ಛತೆಗೆ ಎಕ್ಸ್ಟ್ರಾ ಟೈಮ್‌ ನೀಡಿ

ಮನುಷ್ಯನಿಗೆ ಸೌಂದರ್ಯದ ಜತೆಗೆ ದೇಹದ ಸ್ವಚ್ಛತೆಯೂ ಮುಖ್ಯವಾಗಿದೆ. ಮಹಿಳೆಯರಂತೆಯೇ ಪುರುಷರು ಕೂಡ ತಮ್ಮ ದೇಹದ ಕೆಲವು ಭಾಗಗಳನ್ನು ಸ್ವಚ್ಛವಾಗಿಡಬೇಕು. ಇಲ್ಲದಿದ್ದರೆ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪುರುಷರು ತಮ್ಮ ಹೆಚ್ಚಿನ ದಿನಗಳನ್ನು ಹೊರಗೆ ಕಳೆಯುತ್ತಾರೆ. ಇದರಿಂದ ಧೂಳು, ಮಾಲಿನ್ಯ, ಬೆವರು ಇತ್ಯಾದಿಗಳು ಅವರ ದೇಹವನ್ನು ಕೊಳಕಾಗಿಸುತ್ತದೆ. ಆದ್ದರಿಂದ ಪುರುಷರು ಈ ದೇಹದ ಭಾಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಮಹಿಳೆಯರಂತೆಯೇ ಪುರುಷರು ಸಹ ಅಂಡರ್ ಆರ್ಮ್ಸ್ ಅನ್ನು ಸ್ವಚ್ಛಗೊಳಿಸುವ ಬಗ್ಗೆ ಕಾಳಜಿ ವಹಿಸಬೇಕು. ಪುರುಷರು ಕಾಲಕಾಲಕ್ಕೆ ಅಂಡರ್ ಆರ್ಮ್ಸ್ ಕೂದಲನ್ನು ಸ್ವಚ್ಛಗೊಳಿಸುತ್ತಿರಬೇಕು. ಇಲ್ಲದಿದ್ದರೆ ಕಂಕುಳಿನಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿ ದುರ್ವಾಸನೆಗೆ ಕಾರಣವಾಗಬಹುದು.

ಅನೇಕ ಪುರುಷರ ಪಾದಗಳಲ್ಲಿ ದುರ್ವಾಸನೆ ಬರುತ್ತಿರುತ್ತದೆ. ಏಕೆಂದರೆ ಕೊಳಕು ಸಾಕ್ಸ್ ಧರಿಸುವುದು ಅಥವಾ ದೀರ್ಘಕಾಲದವರೆಗೆ ಬೂಟುಗಳನ್ನು ಧರಿಸುವುದರಿಂದ ಪಾದಗಳಲ್ಲಿ ಗಾಳಿಯಾಡದಂತೆ ಮಾಡಿ ಕೆಟ್ಟ ವಾಸನೆ ಉಂಟುಮಾಡುತ್ತದೆ. ಆದ್ದರಿಂದ ವಾರಕ್ಕೆ 3 ರಿಂದ 4 ಬಾರಿ ಪಾದಗಳನ್ನು ಸ್ಕ್ರಬ್ ಮಾಡಬೇಕು.

ಇತ್ತೀಚಿಗೆ ಯುವಕರು ಉದ್ದ ಗಡ್ಡವನ್ನು ಬಿಡಲು ಇಷ್ಟಪಡುತ್ತಾರೆ. ಆದರೆ ಅದು ಬೆವರಿನಿಂದ ಅಲರ್ಜಿ ಮತ್ತು ಚರ್ಮದ ಸಮಸ್ಯೆಗಳನ್ನು ಉಂಟು ಮಾಡಬಹುದು. ಅದ್ದರಿಂದ ಗಡ್ಡದ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಅನೇಕ ಪುರುಷರು ತಾವೇ ಶೇವ್ ಮಾಡಲು ಇಷ್ಟಪಡುತ್ತಾರೆ. ಆದರೆ ಇಂತಹವರು ರೇಜರ್ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಇದು ಸೋಂಕಿನ ಅಪಾಯವನ್ನು ಉಂಟುಮಾಡಬಹುದು.

ಮಹಿಳೆಯರು ಹೇಗೆ ತಮ್ಮ ಉಗುರಿನ ಬಗ್ಗೆ ಕಾಳಜಿ ವಹಿಸುತ್ತಾರೋ ಹಾಗಯೇ ಪುರುಷರು ಕೂಡಾ ತಮ್ಮ ಉಗುರುಗಳ ಬಗ್ಗೆ ಕಾಳಜಿ ವಹಿಸಬೇಕು. ಉಗುರುಗಳನ್ನು ಸ್ವಚ್ಛವಾಗಿ ಹಾಗೂ ಚಿಕ್ಕದಾಗಿ ಇಟ್ಟುಕೊಳ್ಳಬೇಕು.

ಇನ್ನು ಪುರುಷರೇ ಆಗಲಿ ಮಹಿಳೆಯರೇ ಆಗಲಿ ತಮ್ಮ ಖಾಸಗಿ ಅಂಗಗಳ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !