August 11, 2026
Tuesday, August 11, 2026
spot_img

ಸಿಕ್ಕಿಂ ಸುರಂಗದಲ್ಲಿ ಮಿಥೇನ್ ಅನಿಲ ಸ್ಫೋಟ: 7 ಕಾರ್ಮಿಕರು ಮೃ*ತ್ಯು, ರಕ್ಷಣಾ ಕಾರ್ಯಚರಣೆ ತೀವ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮಿಥೇನ್ ಅನಿಲ ಸ್ಫೋಟ ಸಂಭವಿಸಿ, ಅದರ ಬೆನ್ನಲ್ಲೇ ಭೂಕುಸಿತ ಉಂಟಾದ ಪರಿಣಾಮ ಭಾರೀ ದುರಂತ ಸಂಭವಿಸಿದೆ.

ಈ ಅವಘಡದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, ಸುಮಾರು 27 ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಭೂಕುಸಿತದಿಂದ ಮುಚ್ಚಿದ ಪ್ರವೇಶ ದ್ವಾರ

ಸ್ಫೋಟದ ತೀವ್ರತೆಗೆ ಸುರಂಗದ ಪ್ರವೇಶ ದ್ವಾರ ಭೂಕುಸಿತದಿಂದ ಸಂಪೂರ್ಣ ಮುಚ್ಚಲ್ಪಟ್ಟಿದೆ. ಇದರಿಂದ ಒಳಗಿದ್ದ ಕಾರ್ಮಿಕರನ್ನು ಹೊರತೆಗೆದು ರಕ್ಷಿಸುವ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.

ಇದನ್ನೂ ಓದಿ:

ರಕ್ಷಣಾ ಕಾರ್ಯಾಚರಣೆ ಭರದಿಂದ

ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತದ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ನಿರಂತರ ಪ್ರಯತ್ನ ನಡೆಯುತ್ತಿದೆ.

ಅವಘಡದ ಕಾರಣ ತನಿಖೆ

ಪ್ರಾಥಮಿಕ ಮಾಹಿತಿಯ ಪ್ರಕಾರ ಮಿಥೇನ್ ಅನಿಲ ಸ್ಫೋಟವೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !