September 13, 2026
Sunday, September 13, 2026
spot_img

HEADACHE | ಮೈಗ್ರೇನ್‌ ಇರುವವರನ್ನು ಹೀಗೆ ಅರ್ಥ ಮಾಡ್ಕೊಳಿ, ಈ ಕೆಲಸಗಳೆಲ್ಲ ತಲೆನೋವು ತರಿಸುತ್ತವಂತೆ!

ಒಂದೇ ಒಂದು ದಿನ ಲೇಟಾಗಿ ಮಲ್ಗೋಕೆ ಆಗೋದಿಲ್ವಾ? ಬಿಸಿಲಿಗೆ ಬಂದ್ರೂ ತಲೆ ನೋವು, ತಲೆಸ್ನಾನ ಮಾಡಿದ್ರೂ ತಲೆನೋವು, ಸ್ವಲ್ಪ ಜೋರಾಗಿ ಮಾತಾಡಿದ್ರೂ ತಲೆನೋವು ಅಂತೀರಾ ನಿಮಗೆ ಬೇರೆ ಏನೋ ಸಮಸ್ಯೆ ಇದೆ. ಇದೆಲ್ಲ ನಾರ್ಮಲ್‌ ಅಲ್ಲ ಎಂದು ಇತರರು ನಿಮ್ಮನ್ನು ಜಡ್ಜ್‌ ಮಾಡಬಹುದು. ಆದರೆ ತಲೆನೋವಿಗೂ ಮೈಗ್ರೇನ್‌ಗೂ ವ್ಯತ್ಯಾಸವಿದೆ. ತಲೆನೋವು ಯಾವಾಗೋ ಒಮ್ಮೆ ಬಂದು ಹೋಗುವ ಅತಿಥಿಯಾದ್ರೆ ಮೈಗ್ರೇನ್‌ ಕೂಗಿದರೆ ಓಡಿಬರುವ ಪಕ್ಕದಮನೆಯವರಂತೆ!

ಯಾವುದರಿಂದ ಬರತ್ತೆ ಮೈಗ್ರೇನ್‌?

ಅತಿಯಾದ ಸದ್ದಿನಿಂದ, ಥಿಯೇಟರ್‌, ಪಾರ್ಟಿ ಇನ್ನಿತರ ಕಡೆ ದೊಡ್ಡದಾಗಿ ಮ್ಯೂಸಿಕ್‌ ಹಾಕಿದ್ರೆ ತಲೆನೋವು ಬರುತ್ತದೆ. ರೈಲು ಅಥವಾ ಬಸ್‌ನಲ್ಲಿ ಜನ ಸೌಂಡ್‌ ಹಾಕಿಕೊಂಡು ರೀಲ್ಸ್‌ ನೋಡಿದ್ರೂ ತಲೆನೋವು ಗ್ಯಾರಂಟಿ.

ಸೂರ್ಯನಿಗೂ ಮೈಗ್ರೇನ್‌ ಇರುವವರಿಗೂ ದೋಸ್ತಿ ಇಲ್ಲ. ಬಿಸಿಲು, ಜಾಸ್ತಿ ಬೆಳಕು ಬರುವ ಲೈಟ್‌ನಿಂದಲೂ ಮೈಗ್ರೇನ್‌ ಟ್ರಿಗರ್‌ ಆಗುತ್ತದೆ.

ಬೆಳಗ್ಗೆ ಎದ್ದು ಕೆಲಸ ಮಾಡಿ ಊಟ ತಿನ್ನೋದನ್ನು ತಡ ಮಾಡಿಕೊಂಡರೆ ತಲೆ ನೋವು ಎಂಟ್ರಿ ನೀಡುತ್ತದೆ. ಖಾಲಿ ಹೊಟ್ಟೆಯಲ್ಲಿ ಮಾತ್ರ ಇರಬೇಡಿ.

ಟೆನ್ಶನ್‌ ಹಾಗೂ ಸ್ಟ್ರೆಸ್‌ನಿಂದ ಮಿಸ್‌ ಆಗದೇ ತಲೆನೋವು ಬರುತ್ತದೆ. ನೀವು ಅಂದುಕೊಂಡಂತೆ ಆಗುತ್ತಿಲ್ಲ ಎಂದು ತಿಳಿಯುತ್ತಿದ್ದ ಹಾಗೆ ನಿಮಗೆ ಒತ್ತಡವಾಗುತ್ತದೆ. ಆ ಒತ್ತಡ ಒಂದು ನಿಮಿಷದಲ್ಲೇ ತಲೆನೋವು ತರಿಸುತ್ತದೆ.

ಒಂದೇ ಒಂದು ದಿನ ಕಡಿಮೆ ನಿದ್ದೆ ಮಾಡಿದ್ರೆ ಏನೂ ಆಗೋದಿಲ್ಲ ಅಂದ್ಕೋಬೇಡಿ. ಒಂದು ದಿನ ನಿದ್ದೆ ಕಡಿಮೆ ಮಾಡೋದು ಮೈಗ್ರೇನ್‌ಗೆ ಇನ್ವಿಟೇಷನ್‌ ಕೊಟ್ಟ ಹಾಗೆ.

ಜಿಮ್‌ ವರ್ಕೌಟ್‌, ಇಂಟೆನ್ಸ್‌ ಯೋಗ, ಮೆಟ್ಟಿಲು ಹತ್ತೋದು, ಇನ್ನಿತರ ಫಿಸಿಕಲ್‌ ಆಕ್ಟಿವಿಡಿ ಮಾಡಿದರೂ ಅದು ಕೂಡ ಮೈಗ್ರೇನ್‌ ಟ್ರಿಗರ್

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !