May 25, 2026
Monday, May 25, 2026
spot_img

WEATHER | ರಾಜ್ಯದಲ್ಲೆಲ್ಲಾ ಮಿಕ್ಸ್‌ ವೆದರ್‌, ಕೆಲವು ಜಿಲ್ಲೆಗಳಲ್ಲಿ ಮಳೆ, ಕೆಲವು ಕಡೆ ರಣಬಿಸಿಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಹಲವು ಜಿಲ್ಲೆಗಳ ಜನ ಸೆಖೆಯಿಂದ ಹೈರಾಣಾಗಿದ್ದು, ಬಿಸಿಲು ಯಾವಾಗ ಹೋಗತ್ತೋ ಅಂತ ಕಾಯ್ತಿದ್ದಾರೆ. ಆದರೆ ಕೆಲವು ಜಿಲ್ಲೆಗಳ ಜನ ಮಾತ್ರ ಬಿಸಿಲೇ ಪರವಾಗಿರಲಿಲ್ಲ. ಆಲಿಕಲ್ಲು ಮಳೆ ಮಾತ್ರ ಬೇಡ ಅಂತಿದ್ದಾರೆ.

ಆದರೆ ಇದೇ ವಾತಾವರಣ ಇನ್ನೂ ಒಂದು ವಾರ ಇರಲಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗಲಿದೆ. ಉಳಿದ ಕಡೆ ಮಾತ್ರ ಒಣಹವೆ ಇರಲಿದೆ. ಇನ್ನು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಟ್‌ವೇವ್‌ ಅಲರ್ಟ್‌ ಕೂಡ ಘೋಷಣೆ ಮಾಡಲಾಗಿದೆ. ಆದರೆ ಮಳೆ ಕೂಡ ಬೀಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !