March 7, 2026
Saturday, March 7, 2026
spot_img

ಹಟ್ಟಿ ಚಿನ್ನದ ಗಣಿ ಮುಖ್ಯದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಯ ಮುಖ್ಯದ್ವಾರ ಬಳಿ ಅಪಾಯಕಾರಿ ಸ್ಫೋಟಕಗಳು ಪತ್ತೆಯಾಗಿದೆ. ಸ್ಫೋಟಕಗಳನ್ನು ನೋಡಿ ಕಾರ್ಮಿಕರು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಸ್ಫೋಟಕ್ಕೆ ಬಳಸುವ 15ಕ್ಕೂ ಹೆಚ್ಚು ಮದ್ದುಗಳ ಕ್ರಾಟ್ರಿಜ್‌ಗಳು ಚಿನ್ನದ ಗಣಿ ಕಂಪನಿ ಗೇಟ್‌ ಬಳಿ ಪತ್ತೆಯಾಗಿವೆ. ಆದರೆ ಈ ಸ್ಫೋಟಕಗಳು ಬಂದಿದ್ದು ಹೇಗೆ? ಯಾರು ಇಟ್ಟಿದ್ದು ಎನ್ನುವ ಬಗ್ಗೆ ಮಾಹಿತಿ ಬಂದಿಲ್ಲ.

ಹಟ್ಟಿ ಚಿನ್ನದಗಣಿ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೊಲೀಸರು ಈಗ ಅಲರ್ಟ್ ಆಗಿದ್ದಾರೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಹೊರಟಿದ್ದ ಸವಾರರು ಮದ್ದುಗಳ ಕಾಟ್ರಿಜ್‌ಗಳನ್ನು ಬೀಳಿಸಿಕೊಂಡು ಹೋಗಿದ್ದಾರೆ ಅಂತ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಆದ್ರೆ ಅಪಾಯಕಾರಿ ಸ್ಫೋಟಕಗಳನ್ನ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಬೈಕ್‌ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಅನುಮಾನಗಳು ಮೂಡಿವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !