ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ‘ಬಿಡುಗಡೆಯಾಗದ ಆತ್ಮಚರಿತ್ರೆಯನ್ನು ಉಲ್ಲೇಖಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,ನರವಾಣೆ ಆತ್ಮಚರಿತ್ರೆ ಪುಸ್ತಕ ಅಸ್ತಿತ್ವದಲ್ಲಿದೆ ಎಂದು ಹೇಳಿದರು.
ಸರ್ಕಾರ ಈ ಪುಸ್ತಕ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದೆ,, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಪುಸ್ತಕ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ. ಆದ್ರೆ ಭಾರತದ ಪ್ರತಿಯೊಬ್ಬ ಯುವಕರು ಈ ಪುಸ್ತಕ ಅಸ್ತಿತ್ವದಲ್ಲಿದೆ ಎಂದು ನೋಡಬೇಕು. ಅಂದು ಲಡಾಖ್‌ನಲ್ಲಿ ಏನಾಯಿತು ಎಂಬುದರ ಸಂಪೂರ್ಣ ವಿವರವನ್ನು ನರವಾಣೆ ಬರೆದ ಪುಸ್ತಕದಲ್ಲಿ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಪುಸ್ತಕದಲ್ಲಿ ಅಂದು ನಡೆದ ಮುಖ್ಯ ವಿಷಯ ಉಲ್ಲೇಖವಾಗಿದೆ . ಅದನೆಂದರೆ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರು ಅಂದು ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ ‘ಚೀನಾದ ಟ್ಯಾಂಕ್‌ಗಳು ಕೈಲಾಸ ಪರ್ವತದ ಮೇಲೆ ಬಂದಿವೆ. ನಾವು ಏನು ಮಾಡಬೇಕು? ಎಂದು ಕೇಳಿದ್ದಾರೆ. ಇದಕ್ಕೆ ರಾಜನಾಥ್ ಸಿಂಗ್ ಮೊದಲಿಗೆ ಅವರಿಗೆ ಉತ್ತರಿಸಲಿಲ್ಲ. ಅವರು (ನರಾವಣೆ) ಎಸ್ ಜೈಶಂಕರ್, ಎನ್‌ಎಸ್‌ಎ (ಅಜಿತ್ ದೋವಲ್) ಅವರನ್ನು ಕೇಳಿದರು. ಆದರೆ ಉತ್ತರ ಸಿಗಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.



