October 16, 2026
Friday, October 16, 2026
spot_img

ಶತ್ರುಗಳಿಗೆ ನೋ ಎಂಟ್ರಿ, ಮಿತ್ರರಿಗೆ ವೆಲ್ಕಮ್: ಸಮುದ್ರ ಮಾರ್ಗವನ್ನೇ ಅಸ್ತ್ರವಾಗಿಸಿಕೊಂಡ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಇರಾನ್ ತನ್ನ ಬಿಗಿ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, “ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಶತ್ರು ರಾಷ್ಟ್ರಗಳಿಗೆ ಜಲಮಾರ್ಗವನ್ನು ಮುಚ್ಚುವ ಮತ್ತು ಮಿತ್ರರಾಷ್ಟ್ರಗಳಿಗೆ ಮಾತ್ರ ಮುಕ್ತವಾಗಿಡುವ ಪೂರ್ಣ ಹಕ್ಕು ಇರಾನ್‌ಗಿದೆ” ಎಂದು ಪ್ರತಿಪಾದಿಸಿದರು.

ಗಲ್ಫ್ ಪ್ರದೇಶದಲ್ಲಿ ಅಶಾಂತಿಗೆ ಅಮೆರಿಕ ಮತ್ತು ಇಸ್ರೇಲ್‌ನ ಆಕ್ರಮಣಕಾರಿ ಧೋರಣೆಯೇ ಕಾರಣ ಎಂದು ಅವರು ದೂರಿದ್ದಾರೆ. ಅಮೆರಿಕದ ಸೇನಾ ಪಡೆಗಳು ಗಲ್ಫ್ ರಾಷ್ಟ್ರಗಳ ನಾಗರಿಕರನ್ನು ‘ಮಾನವ ಗುರಾಣಿ’ಗಳನ್ನಾಗಿ ಬಳಸಿಕೊಳ್ಳುತ್ತಿವೆ ಎಂಬ ಆತಂಕಕಾರಿ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ.

ಟ್ವಿಟರ್ ಖಾತೆಯಲ್ಲಿ ಹೋಟೆಲ್ ಬುಕಿಂಗ್ ರಸೀದಿಗಳನ್ನು ಹಂಚಿಕೊಂಡಿರುವ ಅರಘ್ಚಿ, “ಇರಾನ್ ತನ್ನ ಮಿಲಿಟರಿ ನೆಲೆಗಳ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಅಮೆರಿಕದ ಅಧಿಕಾರಿಗಳು ಭಯಗೊಂಡು ತಮ್ಮ ನೆಲೆಗಳಿಂದ ಓಡಿ ಹೋಗಿ ಹೋಟೆಲ್‌ಗಳಲ್ಲಿ ಅವಿತು ಕುಳಿತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಗಲ್ಫ್ ರಾಷ್ಟ್ರಗಳ ಹೋಟೆಲ್‌ಗಳು ಅಮೆರಿಕದ ಅಧಿಕಾರಿಗಳಿಗೆ ಆಶ್ರಯ ನೀಡಬಾರದು, ಇದು ಸ್ಥಳೀಯ ನಾಗರಿಕರ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

Must Read