April 24, 2026
Friday, April 24, 2026
spot_img

ಇಷ್ಟೊಂದು ಹೀನಾಯವಾಗಿ ಸೋತ ಬಳಿಕವೂ ಪಶ್ಚಾತ್ತಾಪ ಇಲ್ವಾ?: MI ಕ್ಯಾಪ್ಟನ್ ಮೇಲೆ ಫ್ಯಾನ್ಸ್ ಫುಲ್ ಗರಂ ಆಗಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL 2026 ನಲ್ಲಿ Mumbai Indians ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿರುವಾಗ, ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ CS K ವಿರುದ್ಧ 103 ರನ್‌ಗಳ ಭಾರಿ ಸೋಲಿನ ಬಳಿಕ ಅವರ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಂದ್ಯ ಮುಗಿದ ತಕ್ಷಣ ಕ್ಯಾಮೆರಾಗಳು ಪಾಂಡ್ಯ ಕಡೆ ತಿರುಗಿದ್ದಾಗ, ಅವರು ತಮ್ಮ ಸ್ನೇಹಿತೆ ಮಹಿಕಾ ಜೊತೆ ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಜೊತೆಗೆ, ಮನೆಗೆ ಹೋಗಿ ಕರೆ ಮಾಡುವಂತೆ ಸೂಚಿಸುತ್ತಿರುವ ಅವರ ಸನ್ನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಂಡ ಇಷ್ಟೊಂದು ಹೀನಾಯ ಸೋಲು ಕಂಡ ಬಳಿಕ ನಾಯಕನಿಂದ ಇಂತಹ ನಡೆ ಸರಿಯೇ ಎಂಬ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ:

ಇದರ ಮಧ್ಯೆ, ಸೋಲಿನ ನಂತರ ಹಾಡಿಗೆ ಕುಣಿಯುತ್ತಿರುವ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದ್ದು, ಪಾಂಡ್ಯ ಅವರ ಗಂಭೀರತೆಯ ಮೇಲೆ ಪ್ರಶ್ನಾರ್ಹತೆ ಮೂಡಿಸಿದೆ. ನೆಟ್ಟಿಗರು ಅವರನ್ನು ಜವಾಬ್ದಾರಿಯುತ ನಾಯಕನಲ್ಲ ಎಂದು ಟೀಕಿಸುತ್ತಿದ್ದಾರೆ.

ಆಟದ ವಿಚಾರದಲ್ಲಿಯೂ ಪಾಂಡ್ಯ ವಿಫಲರಾದರು. ಅವರು ಬೌಲಿಂಗ್‌ನಲ್ಲಿ ರನ್‌ಗಳನ್ನು ಹೆಚ್ಚಾಗಿ ಬಿಟ್ಟುಕೊಟ್ಟಿದ್ದು, ಬ್ಯಾಟಿಂಗ್‌ನಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಮುಂದಿನ ಪಂದ್ಯಗಳಲ್ಲಿ ಅವರು ತಮ್ಮ ನಾಯಕತ್ವ ಮತ್ತು ಪ್ರದರ್ಶನವನ್ನು ಸುಧಾರಿಸಲಾರರೇ ಎಂಬುದು ಕುತೂಹಲವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !