March 10, 2026
Tuesday, March 10, 2026
spot_img

PROTEST | ಇಂದು ದೇಶಾದ್ಯಂತ ಓಲಾ, ಊಬರ್‌ & ರ‍್ಯಾಪಿಡೋ ಮುಷ್ಕರ, ಡಿಮ್ಯಾಂಡ್ಸ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ದೇಶಾದ್ಯಂತ ಓಲಾ, ಊಬರ್‌ & ರ‍್ಯಾಪಿಡೋ ಮುಷ್ಕರ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಮಂದಿ ಓಲಾ, ಊಬರ್‌ ಹಾಗೂ ರ‍್ಯಾಪಿಡೋ ಬಳಕೆ ಮಾಡುತ್ತಾರೆ. ಬಸ್‌ ಗೊತ್ತಾಗೋದಿಲ್ಲ, ಮೆಟ್ರೋ ಸ್ಟೇಷನ್‌ ದೂರ ಇದೆ, ಮಾಮೂಲಿ ಆಟೋದವರು ದುಡ್ಡು ಜಾಸ್ತಿ ಹೇಳ್ತಾರೆ ಅನ್ನೋ ಕಾರಣಕ್ಕೆ ಜನ ಈ ಸಾರಿಗೆಯನ್ನು ಇಷ್ಟಪಡುತ್ತಾರೆ.

ಇಂದು ಮುಷ್ಕರ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಗಳು ಈ ಮುಷ್ಕರಕ್ಕೆ ಕರೆ ನೀಡಿವೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಬೆಂಬಲವಾಗಿ ಕರ್ನಾಟಕದಲ್ಲೂ ಸೇರಿದಂತೆ ದೇಶಾದ್ಯಂತ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಚಾಲಕರು ಸುಮಾರು ಆರು ಗಂಟೆಗಳ ಕಾಲ ತಮ್ಮ ಆ್ಯಪ್‌ಗಳನ್ನು ಆಫ್ ಮಾಡಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !