June 27, 2026
Saturday, June 27, 2026
spot_img

ನಮ್ಮ ಯುವಕರು ನಕಾರಾತ್ಮಕ ರಾಜಕೀಯದ ಕೈಗೊಂಬೆಗಳಾಗುವುದಿಲ್ಲ: ನಿತಿನ್ ನಬಿನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಯುವಕರು ನಕಾರಾತ್ಮಕ ರಾಜಕೀಯಕ್ಕೆ ಎಳೆಯಲು ಪ್ರಯತ್ನಿಸುವವರ ಕೈಗೊಂಬೆಗಳಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಖಡಕ್ ಸಂದೇಶ ನೀಡಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಆದರೆ ಆ ಹೆಸರಿನಲ್ಲಿ ನಮ್ಮ ಯುವ ಜನತೆಗೆ ನಿರ್ದೇಶನ ನೀಡಲು ಯಾರಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು.

ವಿದೇಶದಲ್ಲಿ ಕುಳಿತು ಯುವಕರ ಹಾದಿ ತಪ್ಪಿಸಲು ಸಾಧ್ಯವಿಲ್ಲ

ಈ ದೇಶದ ಅಭಿವೃದ್ಧಿಯಲ್ಲಿ ಯುವಕರ ಶ್ರಮ ಮತ್ತು ಶಕ್ತಿ ಪ್ರಮುಖ ಭಾಗವಾಗಿದೆ. ಆದರೆ ಕೆಲವರು ವಿದೇಶದಲ್ಲಿ ಕುಳಿತು ಭಾರತದ ಯುವಕರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಡಿಜಿಟಲ್ ಮಾಧ್ಯಮಗಳ ದುರ್ಬಳಕೆ

ದೇಶ ಮತ್ತು ಯುವಕರ ಅಭಿವೃದ್ಧಿಯಲ್ಲಿ ಡಿಜಿಟಲ್ ಮಾಧ್ಯಮ ಇಂದು ಪ್ರಮುಖ ಪಾತ್ರವಹಿಸುತ್ತಿದೆ. ಆದರೆ ಅದೇ ಡಿಜಿಟಲ್ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ಇಂದು ಯುವಜನತೆಯ ಹಾದಿ ತಪ್ಪಿಸಲು ಪ್ರಯತ್ನಿಸಿದರೆ, ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಕುರಿತು ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !