October 15, 2026
Thursday, October 15, 2026
spot_img

15ರ ಪೋರನ ವಿರುದ್ಧ ಏನಿದು ಅತಿರೇಕದ ವರ್ತನೆ: ಜೇಮಿಸನ್​ಗೆ ‘ಡಿಮೆರಿಟ್ ಪಾಯಿಂಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮೈದಾನದೊಳಗಿನ ಒಂದು ಘಟನೆ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿಕೆಟ್ ಪಡೆದ ಬಳಿಕ ಡೆಲ್ಲಿ ತಂಡದ ವೇಗಿ ಕೈಲ್ ಜೇಮಿಸನ್ ತೋರಿದ ಆಕ್ರಮಣಕಾರಿ ಸಂಭ್ರಮಕ್ಕೆ ಐಪಿಎಲ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

ವಿಕೆಟ್ ಪಡೆದ ಉತ್ಸಾಹದಲ್ಲಿ ಜೇಮಿಸನ್, 15 ವರ್ಷದ ಬ್ಯಾಟರ್ ಎದುರು ಅತಿರೇಕದ ಸಂಭ್ರಮಾಚರಣೆ ನಡೆಸಿದ್ದು, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ನೀತಿ ಸಂಹಿತೆಯಡಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿ ಅಧಿಕೃತ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:

ಪಂದ್ಯ ರೆಫರಿ ಎದುರು ಜೇಮಿಸನ್ ತಮ್ಮ ವರ್ತನೆ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಡಿಮೆರಿಟ್ ಪಾಯಿಂಟ್ ಎನ್ನುವುದು ಆಟಗಾರರ ಶಿಸ್ತು ಉಲ್ಲಂಘನೆಗೆ ನೀಡುವ ಶಿಕ್ಷಾರ್ಹ ಅಂಕವಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಇವು ಹೆಚ್ಚಾದರೆ ಪಂದ್ಯ ನಿಷೇಧದಂತಹ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.

ಈ ಘಟನೆ ಬಳಿಕ ಮೈದಾನದಲ್ಲಿ ಆಟಗಾರರ ವರ್ತನೆ, ವಿಶೇಷವಾಗಿ ಯುವ ಆಟಗಾರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

Must Read