September 26, 2026
Saturday, September 26, 2026
spot_img

ಪಲ್ಯ, ಗ್ರೇವಿ & More 102 | ಸಾಂಪ್ರದಾಯಿಕ ಗುಜರಾತಿ ಒನ್-ಪಾಟ್ ರೆಸಿಪಿ ದಾಲ್ ಧೋಕ್ಲಿ

ದಾಲ್ ಧೋಕ್ಲಿ ಒಂದು ಪ್ರಸಿದ್ಧ ಗುಜರಾತಿ ಮನೆಯ ಅಡುಗೆ. ಗೋಧಿ ಹಿಟ್ಟಿನ ಚಿಕ್ಕ ತುಂಡುಗಳು ತೊಗರಿ ಬೇಳೆಯ ಸಾರಿಗೆ ಸೇರಿ, ಒಂದೇ ಪಾತ್ರೆಯಲ್ಲಿ ತಯಾರಾಗುವ ಪೌಷ್ಟಿಕ ಹಾಗೂ ತುಂಬಾ ರುಚಿಕರವಾದ ಖಾದ್ಯವಿದು.

ಬೇಕಾಗುವ ಸಾಮಗ್ರಿಗಳು

ಧೋಕ್ಲಿಗೆ

ಗೋಧಿ ಹಿಟ್ಟು: 1 ಕಪ್
ಅರಿಶಿನ: ಚಿಟಿಕೆ
ಖಾರದ ಪುಡಿ: ½ ಚಮಚ
ಓಮ (Ajwain): ½ ಚಮಚ
ಎಣ್ಣೆ: 1 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ನೀರು: ಹಿಟ್ಟು ಕಲೆಸಲು ಅಗತ್ಯವಿರುವಷ್ಟು

ದಾಲ್ (ಸಾರು)

ತೊಗರಿ ಬೇಳೆ: ½ ಕಪ್
ಹುಣಸೆ ರಸ: ಸ್ವಲ್ಪ
ಬೆಲ್ಲ: 1 ಸಣ್ಣ ತುಂಡು
ಕಡಲೆಕಾಯಿ: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ನೀರು: ಅಗತ್ಯವಿರುವಷ್ಟು

ಒಗ್ಗರಣೆ

ಎಣ್ಣೆ ಅಥವಾ ತುಪ್ಪ: 2 ಚಮಚ
ಸಾಸಿವೆ: ½ ಚಮಚ
ಜೀರಿಗೆ: ½ ಚಮಚ
ಇಂಗು: ಚಿಟಿಕೆ
ಒಣಮೆಣಸಿನಕಾಯಿ: 1-2
ಕರಿಬೇವಿನ ಎಲೆ: ಸ್ವಲ್ಪ
ಅರಿಶಿನ: ¼ ಚಮಚ
ಖಾರದ ಪುಡಿ: ½ ಚಮಚ
ಕೊತ್ತಂಬರಿ ಸೊಪ್ಪು: ಅಲಂಕಾರಕ್ಕೆ

ತಯಾರಿಸುವ ವಿಧಾನ

ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು, ಉಪ್ಪು, ಅರಿಶಿನ, ಖಾರದ ಪುಡಿ, ಓಮ ಮತ್ತು ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. 10–15 ನಿಮಿಷ ನೆನೆಸಿಡಿ. ನಂತರ ಚಪಾತಿಯಂತೆ ಲಟ್ಟಿಸಿ, ಚಿಕ್ಕ ಚೌಕ ಅಥವಾ ವಜ್ರಾಕಾರದ ತುಂಡುಗಳಾಗಿ ಕತ್ತರಿಸಿ.

ಬೇಯಿಸಿದ ತೊಗರಿ ಬೇಳೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಹುಣಸೆ ರಸ, ಬೆಲ್ಲ, ಉಪ್ಪು, ನೀರು ಮತ್ತು ಕಡಲೆಕಾಯಿ ಸೇರಿಸಿ ಕುದಿಸಿ.

ಈಗ ತುಪ್ಪ/ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಎಲೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಇದನ್ನು ದಾಲ್‌ಗೆ ಸೇರಿಸಿ.

ನಂತರ ಕತ್ತರಿಸಿದ ಧೋಕ್ಲಿ ತುಂಡುಗಳನ್ನು ನಿಧಾನವಾಗಿ ಸೇರಿಸಿ. ಮಧ್ಯಮ ಉರಿಯಲ್ಲಿ 10–15 ನಿಮಿಷ ಕುದಿಸಿ. ಧೋಕ್ಲಿ ಮೃದುವಾಗಿ ಬೆಂದು ದಾಲ್ ದಪ್ಪವಾಗುತ್ತದೆ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಬಿಸಿಬಿಸಿಯಾದ ದಾಲ್ ಧೋಕ್ಲಿ ಈಗ ಸವಿಯಲು ಸಿದ್ಧ.

Must Read