October 12, 2026
Monday, October 12, 2026
spot_img

‘ರೂಮ್ ಗೆ ಬರ್ತಿಯಾ?’ ಅಂತ ಕೇಳಿದ ‘ಪಂಡಿತ್‌ಜಿ’: ರಾಮ್‌ಘಾಟ್‌ನಲ್ಲಿ ಕಹಿ ಅನುಭವ ಹಂಚಿಕೊಂಡ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲಿ ಹೋದ್ರು ಮಹಿಳೆಯರ ಸೇಫ್ಟಿ ಬಗ್ಗೆ ಒಂದು ಚರ್ಚೆ ಇದ್ದೆ ಇರುತ್ತೆ. ಮಾರ್ಕೆಟ್, ಸ್ಕೂಲ್, ಕಾಲೇಜ್ ಈಗ ಕೊನೆಗೆ ದೇವಸ್ಥಾನದಲ್ಲೂ ಮಹಿಳೆ ಸುರಕ್ಷಿತ ಅಲ್ಲ ಅನ್ನೋದು ಈಗ ಮತ್ತೊಮ್ಮೆ ಸಾಬೀತಾಗಿದೆ.

ಉಜ್ಜಯಿನಿಯ ಪ್ರಸಿದ್ಧ ರಾಮ್ ಘಾಟ್‌ನಲ್ಲಿ ಮಹಿಳೆಯೊಬ್ಬರಿಗೆ ಪಂಡಿತನ ವೇಷದಲ್ಲಿದ್ದ ವ್ಯಕ್ತಿಯೊಬ್ಬ ‘ರೂಮ್ ಗೆ ಬರ್ತಿಯಾ? ಎಂದು ಕರೆದು ಅಸಹಜವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಕುರಿತು ನೈರಾ ರಾಯ್ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ:

ರಾಮ್ ಘಾಟ್‌ನಲ್ಲಿ ಒಬ್ಬಂಟಿಯಾಗಿ ಕುಳಿತು ಕಾಲು ಮುರಿದಿದ್ದ ನಾಯಿಗೆ ಆರೈಕೆ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ತನ್ನ ಬಳಿ ಬಂದು, ತನ್ನ ಕೊಠಡಿಗೆ ಬರುವಂತೆ ಕರೆದಿದ್ದಾನೆ ಎಂದು ನೈರಾ ಆರೋಪಿಸಿದ್ದಾರೆ. ಅಲ್ಲದೆ, ತಾನೇ ಊಟ ಮಾಡಿಕೊಡುವುದಾಗಿ ಹೇಳಿದ್ದಾಗಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯ ಮಾತಿನಿಂದ ಅಸಮಾಧಾನಗೊಂಡ ನೈರಾ, ಆತನ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಬಳಿಕ ಆತ ಅಲ್ಲಿಂದ ತೆರಳಿದ್ದಾನೆ ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳಲ್ಲೂ ಮಹಿಳೆಯರ ಸುರಕ್ಷತೆ ಕುರಿತು ಎಚ್ಚರಿಕೆ ಅಗತ್ಯ ಎಂದು ಈ ಘಟನೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ನೈರಾ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯಿಸಿದ್ದು, ಘಟನೆ ವೇಳೆ ಧೈರ್ಯವಾಗಿ ಪ್ರಶ್ನಿಸಿದ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಒಂಟಿಯಾಗಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.

Must Read