October 10, 2026
Saturday, October 10, 2026
spot_img

ನಟಿ ತನಿಷಾ ಕುಪ್ಪಂಡಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿ ಉಗಿಸಿಕೊಂಡ ಫೋಟೊಗ್ರಾಫರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್‌ನಿಂದ ಹೊರಬಂದ ನಂತರ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಕಾರ್ಯಕ್ರಮಗಳ ಉದ್ಘಾಟನೆಗಳಲ್ಲಿ, ಫೋಟೋಶೂಟ್‌ಗಳಲ್ಲಿ ತನಿಷಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೊಗ್ರಾಫರ್‌ಗಳು ನಟಿಯರನ್ನು ಅಪ್ರೋಚ್‌ ಮಾಡಿ ಅವರ ಫೋಟೊಗಳನ್ನು ತೆಗೆದು ತಮ್ಮ ಪೇಜ್‌ನಲ್ಲಿ ಹಾಕಿಕೊಳ್ತಾರೆ. ಇದು ಮೇಲ್ನೋಟಕ್ಕೆ ಫ್ರೀ ಎನ್ನುವಂತೆ ಕಾಣುತ್ತದೆ. ಆದರೆ ವಿಡಿಯೋ ಶೂಟಿಂಗ್‌ ರೀತಿ ಆಗುತ್ತದೆ. ನಟಿಯರಿಗೆ ಮೊದಲೇ ಹಣ ಕೊಟ್ಟು ಅಕಸ್ಮಾತ್‌ ಆಗಿ ಸಿಕ್ಕಿದ್ದಾರೆ ಎನ್ನುವ ರೀತಿ ಬಿಂಬಿಸಲಾಗುತ್ತದೆ.

ಇದೇ ರೀತಿ ಫೋಟೊಗ್ರಾಫರ್‌ ಒಬ್ಬರು ನಿಮ್ಮ ಜೊತೆ ಫೋಟೊಶೂಟ್‌ಗೆ ಎಷ್ಟು ಹಣ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್‌ ಮಾಡಿದ್ದಾರೆ. ತನಿಷಾ ರೇಟ್‌ ಹೇಳಿದ್ದು, ಮೇಕಪ್‌ ನಾನೇ ಮಾಡಿಕೊಳ್ತೇನೆ ಎಂದಿದ್ದಾರೆ. ಅವರು ಹಣದ ಡೀಟೇಲ್‌ ಹೇಳಿದ ತಕ್ಷಣ ಶಾಕ್‌ ಆದ ಫೋಟೊಗ್ರಾಫರ್‌ ಇದೇ ಹಣಕ್ಕೆ ಡೇಟಿಂಗ್‌ ಬರ್ತೀರಾ ನೋಡಿ ಎಂದು ಮೆಸೇಜ್‌ ಮಾಡಿದ್ದಾರೆ.

ಅನಿಲ್‌ ಕುಮಾರ್‌ ಎನ್ನುವ ಇನ್ಸ್ಟಾಗ್ರಾಮ್‌ ಪ್ರೊಫೈಲ್‌ನ್ನು ತನಿಷಾ ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ನಿಮ್ಮಂತ ನಾನ್‌ಸೆನ್ಸ್‌ ಮಾತನಾಡುವ ಫೋಟೊಗ್ರಾಫರ್ಸ್‌ನಿಂದ ನಿಜವಾದ ಫೋಟೊಗ್ರಾಫರ್ಸ್‌ ಮರ್ಯಾದಿ ಹೋಗುತ್ತಿದೆ. ಶೂಟ್‌ ಮಾಡೋಕೆ ಯೋಗ್ಯತೆ ಇಲ್ಲ ಅಂದ್ರೆ ಕೇಳಕ್ಕೆ ಬರ್ಬಾರ್ದು. ನಿಮ್ಮಂತ ಥರ್ಡ್‌ ಕ್ಲಾಸ್‌ ಜನರಿಂದ ಬೇರೆ ಫೋಟೊಗ್ರಾಫರ್ಸ್‌ಗೆ ಅವಮಾನ, ಥೂನಿಮ್ಮ ಜನ್ಮಕ್ಕೆ. ನನಗೆ ಸಪೋರ್ಟ್‌ ಮಾಡೋಕೆ ಇಷ್ಟವಿದ್ರೆ ಈ ರಿಪೋರ್ಟ್‌ರ್‌ನ್ನ ಇನ್ಸ್ಟಾಗ್ರಾಮ್‌ನಿಂದ ಓಡಿಸೋಕೆ ರಿಪೋರ್ಟ್‌ ಮಾಡಿ ಎಂದು ತನಿಷಾ ಮನವಿ ಮಾಡಿಕೊಂಡಿದ್ದಾರೆ.

Must Read