August 19, 2026
Wednesday, August 19, 2026
spot_img

ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ: ಮೂವರು ಸಿಬ್ಬಂದಿಗೆ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಎಚ್‌ಎಎಲ್‌ನ ಬೇಬಿಕೇರ್‌ ಒಂದರಲ್ಲಿ ಮಕ್ಕಳ ಮೇಲೆ ದೈಹಿಕ ಹಲ್ಲೆ ನಡೆಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆ ಪೊಲೀಸರು ಮೂವರು ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದಾರೆ.

ಹೆಚ್‌ಎಎಲ್‌ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದು, ಇದರ ಜೊತೆಗೆ ಬೇಬಿಕೇರ್ ಮೈಂಟೇನೆನ್ಸ್ ಹಾಗೂ ಕಂಪನಿ ಅಡ್ಮಿನ್ ಡಿಪಾರ್ಟ್ಮೆಂಟ್‌ಗೂ ನೋಟಿಸ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಕಂಪನಿಯೊಂದರ ಉದ್ಯೋಗಿಗಳಿಗಾಗಿ ಮಾತ್ರ ಈ ಬೇಬಿಕೇರ್‌ ಆರಂಭ ಮಾಡಲಾಗಿತ್ತು. ಕಂಪನಿಗೆ ಕೆಲಸಕ್ಕೆ ಹೋಗುವ ಮುನ್ನ ಪೋಷಕರು ಮಕ್ಕಳನ್ನು ಇಲ್ಲಿ ಬಿಟ್ಟು ಹೋಗುತ್ತಿದ್ದರು. ವಾಪಾಸ್‌ ಮನೆಗೆ ಹೋಗುವಾಗ ಕರೆದುಕೊಂಡು ಹೋಗುತ್ತಿದ್ದರು. ಇಲ್ಲಿ ಸಿಬ್ಬಂದಿಯನ್ನು ಕೂಡ ಕಂಪನಿಯೇ ನೇಮಕ ಮಾಡಿತ್ತು. ದೈಹಿಕ ಹಿಂಸೆಯ ವಿಡಿಯೋ ವೈರಲ್‌ ಆಗ್ತಿದ್ದಂತೆಯೇ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ.

ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿದ್ದರು. ಇದನ್ನು ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಕ್ಕಳ ಮೇಲೆ ಆಯಾಗಳು ಕ್ರೌರ್ಯ ಮೆರೆದಿರುವ ವೀಡಿಯೋ ಪರಿಶೀಲನೆ ಮಾಡಿ, ಐವರು ಆಯಾಗಳ ಮೇಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರನ್ವಯ ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು, ಬಿಂದು ಸೇರಿ ಐವರ ಮೇಲೆ ಎಫ್‌ಐಆರ್ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !