July 21, 2026
Tuesday, July 21, 2026
spot_img

ಶೀಘ್ರವೇ ಪ್ರಧಾನಿ ಮೋದಿಯಿಂದ ರಾಮ ಮಂದಿರದ ಮೇಲೆ 21 ಅಡಿ ಎತ್ತರದ ಧರ್ಮ ಧ್ವಜಾರೋಹಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25 ರಂದು ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ 21 ಅಡಿ ಎತ್ತರದ ಧಾರ್ಮಿಕ(ಧರ್ಮ) ಧ್ವಜವನ್ನು ಹಾರಿಸಲಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಈ ಕಾರ್ಯಕ್ರಮವು ದೇವಾಲಯದ ನಿರ್ಮಾಣವನ್ನು ಅಧಿಕೃತವಾಗಿ ಪೂರ್ಣಗೊಳಿಸಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ ಅವರು, ನವೆಂಬರ್ 25 ರಂದು ಪ್ರಧಾನಿ ಮೋದಿ ಅವರ ಆಗಮನವನ್ನು ದೃಢಪಡಿಸಿದರು ಮತ್ತು ಈ ಸಮಾರಂಭ ಐತಿಹಾಸಿಕವಾಗಿರುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಧರ್ಮ ಧ್ವಜಾರೋಹಣದ ಮೂಲಕ, ನಂಬಿಕೆ ಮತ್ತು ಕಾಯುವಿಕೆಯ ಬಹುದಿನಗಳ ಕನಸು ಈಗ ನನಸಾಗಿದೆ ಎಂದು ಜಗತ್ತಿಗೆ ತಿಳಿಸುತ್ತಾರೆ ಎಂದರು.

ಮುಖ್ಯ ದೇವಾಲಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಹೊರಗೋಡೆಯ ನಿರ್ಮಾಣವೂ ಅಂತಿಮ ಹಂತದಲ್ಲಿದ್ದು, ಶೇಷಾವತಾರ ದೇವಸ್ಥಾನ, ಸಪ್ತ ಮಂಟಪ ಮತ್ತು ಪುಷ್ಕರಣಿ ಕಾಮಗಾರಿ ಪೂರ್ಣಗೊಂಡಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !