ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಕಲಾವಿದರನ್ನೇ ಒಳಗೊಂಡು ಸದ್ದಿಲ್ಲದೆ ತೆರೆಗೆ ಬಂದಿದ್ದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿದ್ದ ಈ ಚಿತ್ರ, ಇದೀಗ ವಿಶ್ವಾದ್ಯಂತ ಒಟ್ಟು 111.07 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 100 ಕೋಟಿ ಕ್ಲಬ್‌ಗೆ ಅದ್ಧೂರಿಯಾಗಿ ಲಗ್ಗೆ ಇಟ್ಟಿದೆ.
ವಾರದಿಂದ ವಾರಕ್ಕೆ ಹೆಚ್ಚಿದ ಗಳಿಕೆಯ ಗ್ರಾಫ್
ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಗಳಿಕೆ ಕೊಂಚ ನಿಧಾನಗತಿಯಲ್ಲಿತ್ತು. ಆದರೆ, ಕೇವಲ ಪ್ರೇಕ್ಷಕರ ‘ಬಾಯಿಮಾತಿನ ಪ್ರಚಾರ’ ಚಿತ್ರದ ಭಾಗ್ಯವನ್ನೇ ಬದಲಾಯಿಸಿತು. ಮೊದಲ ವಾರದಲ್ಲಿ ಕೇವಲ 5.32 ಕೋಟಿ ಗಳಿಸಿದ್ದ ಈ ಸಿನಿಮಾ, ಎರಡನೇ ವಾರಕ್ಕೆ ಬರೋಬ್ಬರಿ 23.65 ಕೋಟಿ ಬಾಚಿಕೊಳ್ಳುವ ಮೂಲಕ ಭರ್ಜರಿ ವೇಗ ಪಡೆದುಕೊಂಡಿತು. ಇನ್ನು ಮೂರನೇ ವಾರದಲ್ಲಂತೂ ಚಿತ್ರಮಂದಿರಗಳತ್ತ ಪ್ರೇಕ್ಷಕರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರಿಂದ ಅತಿ ಹೆಚ್ಚು ಅಂದರೆ ಬರೋಬ್ಬರಿ 36.40 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು. ನಾಲ್ಕನೇ ವಾರದಲ್ಲೂ ತನ್ನ ಭರ್ಜರಿ ಮುನ್ನಡೆಯನ್ನು ಮುಂದುವರಿಸಿದ ಚಿತ್ರವು 27 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತೀಯ ನೆಟ್ ಕಲೆಕ್ಷನ್ ಬರೋಬ್ಬರಿ 92.37 ಕೋಟಿ ತಲುಪಿದೆ. ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ 111.07 ಕೋಟಿ ರೂ. ಗಡಿ ದಾಟಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:
ಯಾರೆಲ್ಲ ಇದ್ದಾರೆ ಈ ಚಿತ್ರದಲ್ಲಿ?
ಮನೋಜ್ ಕುಮಾರ್ ನಿರ್ದೇಶನದ ಈ ಅದ್ಭುತ ಸಿನಿಮಾದಲ್ಲಿ ಶ್ರೀರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದಿದ್ದರೂ ಕೇವಲ ಕಥೆ ಮತ್ತು ಕಂಟೆಂಟ್ ಮೂಲಕವೇ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದ ಗಳಿಕೆ ಮಾಡಿರುವುದು ಸ್ಯಾಂಡಲ್‌ವುಡ್‌ಗೆ ಹೊಸ ಭರವಸೆ ನೀಡಿದೆ.



