May 16, 2026
Saturday, May 16, 2026
spot_img

ನೇಪಾಳದಲ್ಲಿ ಮತ್ತೆ ಜನಾಕ್ರೋಶ: ಹೊಸ ಸರ್ಕಾರದ ಮೊದಲ ವಿಕೆಟ್ ಪತನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಸರಕಾರ ರಚನೆಗೊಂಡ ಬಳಿಕ ಶಾಂತವಾಗಿದ್ದ ನೇಪಾಳದಲ್ಲಿ ಮತ್ತೆ ಜನಾಕ್ರೋಶ ಭುಗಿಲೆದ್ದಿದ್ದು, ಇದರ ಬೆನ್ನಲ್ಲೇ ಗೃಹ ಸಚಿವ ಸುಧನ್ ಗುರುಂಗ್ ಕೇವಲ 26 ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ.

ನೇಪಾಳದಲ್ಲಿ ಕಳೆದ ವರ್ಷ ಭುಗಿಲೆದ್ದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಚುನಾವಣೆ ನಡೆದು ರ‍್ಯಾಪರ್‌ ಕಂ ರಾಷ್ಟ್ರೀಯ ನಾಯಕ ಬಾಲೆನ್ ಶಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇತ್ತ ಹೊಸ ಸರ್ಕಾರ ರಚನೆಯಾಗಿ ಒಂದೇ ತಿಂಗಳಿನಲ್ಲಿ ಜನಾಕ್ರೋಶ ಭುಗಲೆದಿದ್ದು, ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.

ಇದರ ನಡುವೆ ನೇಪಾಳದ ಗೃಹ ಸಚಿವ ಸುಧನ್ ಗುರುಂಗ್ ಅವರು ಹಣಕಾಸಿನ ವಿಚಾರದಲ್ಲಿ ಎದುರಾದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಗಾಗಿ ರಾಜಿನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಸುಧನ್ ಗುರುಂಗ್ ಅವರು ಉದ್ಯಮಿ ಜೊತೆ ಸೇರಿಕೊಂಡು ಅನುಮಾನಾಸ್ಪದ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ವ್ಯಾಪಕ ಪ್ರತಿಭಟನೆಗಳ ನಂತರ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !