June 6, 2026
Saturday, June 6, 2026
spot_img

ಆನ್‌ಲೈನ್ ಮೆಡಿಸಿನ್‌ ಮಾರಾಟಕ್ಕೆ ಗರಂ: ಮೇ 20ರಂದು ದೇಶವ್ಯಾಪಿ ಔಷಧಿ ಮಾರಾಟ ಮಳಿಗೆಗಳು ಬಂದ್

ಹೊಸದಿಗಂತ ವರದಿ ಅಂಕೋಲಾ:

ಆನ್‌ಲೈನ್ ಔಷಧಿ ವ್ಯಾಪಾರ ನಿಲುಗಡೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಅಖಿಲ ಭಾರತೀಯ ಔಷಧಿ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಮೇ. 20 ರಂದು ರಾಷ್ಟ್ರಾದ್ಯಂತ ಒಂದು ದಿನದ ಮುಷ್ಕರ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ದೇವಿದಾಸ ಪ್ರಭು ತಿಳಿಸಿದ್ದಾರೆ.

ವೈದ್ಯರ ಸಲಹಾ ಚೀಟಿಯಿಲ್ಲದೇ ಔಷಧಿ ನೀಡುವಂತಿಲ್ಲ

ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‌ಲೈನ್ ಮೂಲಕ ಅನಧಿಕೃತವಾಗಿ ಔಷಧಿ ವ್ಯಾಪಾರ ನಡೆಯುತ್ತಿದ್ದು, ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ನಮಗೆ ವೈದ್ಯರ ಸಲಹಾ ಚೀಟಿಯಿಲ್ಲದೇ ಔಷಧಿ ನೀಡುವಂತಿಲ್ಲ .ಆದರೆ ಆನ್‌ಲೈನ್‌ನಲ್ಲಿ ಇಂತಹ ಯಾವುದೇ ನಿರ್ಬಂಧಗಳಿಲ್ಲ. ಹೀಗಾಗಿ ಯುವಕರು ನಿಷೇಧಿತ ಮತ್ತು ಮತ್ತು ಬರುವ ಔಷಧಿಯನ್ನು ಆನ್‌ಲೈನ್ ಮೂಲಕ ತರಿಸುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಹೀಗಾಗಿ ಸರ್ಕಾರ ತಕ್ಷಣ ಆನ್‌ಲೈನ್ ಔಷಧಿ ವ್ಯಾಪಾರಕ್ಕೆ ತಡೆ ಮಾಡಬೇಕು ಎಂದವರು ಒತ್ತಾಯಿಸಿದರು.

ಇದನ್ನೂ ಓದಿ:

ಔಷಧಿ ವ್ಯಾಪಾರಿಗಳಿಗೆ ಎನ್.ಪಿ.ಪಿ.ಎ ಸಂಸ್ಥೆ ಗರಿಷ್ಠ ಬೆಲೆ ಮತ್ತು ಡಿಸ್ಕೌಂಟ್ ಮಿತಿಯನ್ನು ನಿರ್ಧರಿಸುತ್ತದೆ. ನಮಗೆ ಡಿಸ್ಕೌಂಟ್ ಶೇ. 16 ರಷ್ಟಿದೆ. ಆದರೆ ಆನ್‌ಲೈನ್ ವ್ಯಾಪಾರಿಗಳು ಶೇ. 30 ರವರೆಗೆ ಡಿಸ್ಕೌಂಟ್ ನೀಡುತ್ತಿದ್ದು, ಇದು ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮನೆಮನೆಗೆ ಔಷಧಿ ತಲುಪಿಸಬಹುದು ಎಂದು ತಂದಿದ್ದ ತಿದ್ದುಪಡಿಯನ್ನು ಈಗ ಆನ್ ಲೈನ್ ಮಾರಾಟಗಾರರು ದುರುಪಯೋಗಪಡಿಸಿಕೊಂಡು ನಿಷೇಧಿತ ಔಷಧಿಯನ್ನು ಮನೆಗೆ ತಪಿಸುವಂತಹ ಮಾರಕ ವಿದ್ಯಮಾನ ನಡೆಯುತ್ತಿದೆ. ಹೀಗಾಗಿ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ನಮಗೆ ನ್ಯಾಯ ಒದಗಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಸಂಜಯ ಕಾಮತ್, ಸುಬೋಧ ನಾಯಕ, ಭಾಸ್ಕರ ರಾಯ್ಕರ್, ಸುಧೀರ ನಾಯ್ಕ, ವಿನೋದ ಪ್ರಭು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !