October 9, 2026
Friday, October 9, 2026
spot_img

ದೂದ್‌ ಸಾಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ 39 ಮಂದಿಗೆ ದಂಡ ವಿಧಿಸಿದ ರೈಲ್ವೆ ಸಂರಕ್ಷಣಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೂದ್‌ ಸಾಗರ ಜಲಪಾತಕ್ಕೆ ಹೋಗಲು ರೈಲ್ವೆ ಹಳಿಗಳ ಮೇಲೆ ಹೋಗುತ್ತಿದ್ದ 39 ಮಂದಿಯನ್ನು ಕ್ಯಾಸಲ್‌ರಾಕ್‌ನಲ್ಲಿ ರೈಲ್ವೆ ಸಂರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಿದೆ.

ಹಾಲಿನಂತೆ ಕಾಣುವ ಈ ಜಲಪಾತವನ್ನು ನೋಡಲು ಜನ ಉತ್ಸುಕರಾಗಿ ಆಗಮಿಸುತ್ತಾರೆ. ನಿತ್ಯವೂ ಸಾವಿರಾರು ಮಂದಿ ಜಲಪಾತ ನೋಡಲು ಬರುತ್ತಾರೆ. ಆದರೆ ರೈಲ್ವೆ ಹಳಿಗಳ ಮೇಲೆ ನಡೆದು ದೂದ್‌ ಸಾಗರವನ್ನು ನೋಡಲು ಬರುತ್ತಾರೆ. ಆದರೆ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡ ಟ್ರ್ಯಾಕ್‌ ಮೇಲೆ ಓಡಾಡುವುದನ್ನು ನಿಷೇಧಿಸಲಾಗಿದೆ.

ರೈಲು ಹಳಿಗಳ ಮೇಲೆ ನಡೆಯುವುದು ಟ್ರೆಕ್ಕಿಂಗ್‌ಗೆ ಬರುವವರ ಜೀವಕ್ಕೆ ಅಪಾಯ ಉಂಟುಮಾಡುವುದಲ್ಲದೆ, ರೈಲು ಸಂಚಾರದ ಸುಗಮ ಕಾರ್ಯಾಚರಣೆಯನ್ನೂ ಅಡ್ಡಿಪಡಿಸುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ದೂದ್ ಸಾಗರ್ ಗೆ ಈ ಮಾರ್ಗದ ಮೂಲಕ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕೆಲವು ಪ್ರವಾಸಿಗರು ಅರಣ್ಯ ಮಾರ್ಗದ ಮೂಲಕ ಟ್ರಕ್ಕಿಂಗ್ ಮಾಡಿ, ರೈಲು ಹಳಿ, ಸುರಂಗ ಹಾಗೂ ಸೋನಾಲಿಯಂ ಮತ್ತು ದೂದ್ ಸಾಗರ್ ರೈಲು ಯಾರ್ಡ್‌ಗಳ ಮೂಲಕ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಶನಿವಾರ ನಾವು 32 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ವಾಸ್ಕೊದಲ್ಲಿನ ಆರ್ ಪಿಎಫ್ ಮೂಲಗಳು ತಿಳಿಸಿವೆ. ಸೋಮವಾರವೂ ಇನ್ನೂ ಏಳು ಮಂದಿಯನ್ನು ವಶಕ್ಕೆ ಪಡೆದು, ತಲಾ 500 ರೂಪಾಯಿ ದಂಡ ವಸೂಲಿ ಮಾಡಿದ ಬಳಿಕ ಬಿಡುಗಡೆ ಮಾಡಿತು.

ದಂಡ ಪಾವತಿಸಲು ವಿಫಲವಾದರೆ ಮೂರು ತಿಂಗಳು ಜೈಲುಶಿಕ್ಷೆ ವಿಧಿಸಲಾಗುತ್ತದೆ.

Must Read