May 17, 2026
Sunday, May 17, 2026
spot_img

IPL | ಜೇಟ್ಲಿ ಮೈದಾನದಲ್ಲಿ ಅಬ್ಬರಿಸಿದ ರಾಜಸ್ಥಾನ್ ಬಾಯ್ಸ್: ಡೆಲ್ಲಿ ಗೆಲುವಿಗೆ ಬಿಗ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣ್ ಜೇಟ್ಲಿ ಮೈದಾನದಲ್ಲಿ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ರಿಯಾನ್ ಪರಾಗ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್​ಗಳಿಸಿದೆ.

ಜುರೆಲ್ -ವೈಭವ್ ಭರ್ಜರಿ ಆಟ

ಟಾಸ್ ಸೋತು ಬ್ಯಾಟಿಂಗ್​​ಗೆ ಇಳಿದ ರಾಜಸ್ಥಾನ್ ಗೆ ಯಶಸ್ವಿ ಜೈಸ್ವಾಲ್​ 12 ಗೆ ಕೈಕೊಟ್ಟರು. ಬಳಿಕ ವೈಭವ್ ಸೂರ್ಯವಂಶಿ 2ನೇ ವಿಕೆಟ್ ಜೊತೆಯಾಟದಲ್ಲಿ ಜುರೆಲ್ ಜೊತೆಗೂಡಿ 70 ರನ್​ಗಳ ಜೊತೆಯಾಟ ನೀಡಿದರು. ಸೂರ್ಯವಂಶಿ 21 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು.

ನಾಯಕ ಪರಾಗ್ ಬೊಂಬಾಟ್ ಆಟ

ಬಳಿಕ ಬಂದ ನಾಯಕ ರಿಯಾನ್ ಪರಾಗ್ 3 ಬೌಂಡರಿ, 5 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. 15ನೇ ಓವರ್​ನ ಪೆವಿಲಿಯನ್ ಗೆ ಸೇರಿದರು. ಇತ್ತ ಜುರೆಲ್ ಭರ್ಜರಿ ಬ್ಯಾಟಿಂಗ್ ನಡೆಸಿ 53 ರನ್ ಗೆ ವಿಕೆಟ್ ಒಪ್ಪಿಸಿದರು.

ನಂತರ ಡೊನೊವೆನ್ ಪರೇರಾ 0 ಹಾಗೂರವಿ ಸಿಂಗ್ 4 , ಶುಭಂ ದುಬೆ 5, ದಾಸುನ್ ಶನಕಾ 10 ಗಳಿಸಿ ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !