September 16, 2026
Wednesday, September 16, 2026
spot_img

ಮಗಳೊಂದಿಗೆ ರಣಬೀರ್-ಆಲಿಯಾ ಕ್ಯೂಟ್ ಮೂಮೆಂಟ್ಸ್: ರಾಹ ಜೊತೆಗಿನ ಅಪರೂಪದ ಫೋಟೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ನ ತಾರಾ ಜೋಡಿಯಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಬಿಡುವಿನ ವೇಳೆಯಲ್ಲಿ ಮಗಳು ರಹಾ ಕಪೂರ್ ಜೊತೆ ಕಳೆದ ಸುಂದರ ದಿನಗಳ ನೆನಪನ್ನು ಮರಳಿ ಹಸಿರಾಗಿಸಿದ್ದಾರೆ. ನಟಿ ಆಲಿಯಾ ಭಟ್ ಅವರು ತಮ್ಮ ರಜಾದಿನಗಳ ಇದುವರೆಗೆ ಯಾರೂ ನೋಡದ ಕೆಲವು ಅಪರೂಪದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದೋಣಿ ವಿಹಾರದಲ್ಲಿ ಕಪೂರ್ ಫ್ಯಾಮಿಲಿ

ಆಲಿಯಾ ಭಟ್ ಹಂಚಿಕೊಂಡಿರುವ ಈ ಆಲ್ಬಮ್‌ಗೆ “good old days, cuddles and all” ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಆಲ್ಬಮ್‌ನ ಮೊದಲ ಚಿತ್ರದಲ್ಲೇ ಇಡೀ ಕುಟುಂಬದ ಕ್ಯೂಟ್ ಝಲಕ್ ಸಿಕ್ಕಿದೆ. ಇದರಲ್ಲಿ ರಣಬೀರ್, ಆಲಿಯಾ ಮತ್ತು ಪುಟ್ಟ ರಹಾ ಮೂವರೂ ಸಮುದ್ರದಲ್ಲಿ ಬೋಟ್ ರೈಡ್ ಎಂಜಾಯ್ ಮಾಡುತ್ತಿದ್ದಾರೆ. ರಹಾ ತನ್ನ ತಂದೆ-ತಾಯಿಯ ಮಧ್ಯೆ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದರೆ, ಟೋಪಿ ಧರಿಸಿರುವ ರಣಬೀರ್ ಅವರು ಪತ್ನಿ ಆಲಿಯಾ ಹೆಗಲ ಮೇಲೆ ಕೈ ಹಾಕಿ ಕುಳಿತಿರುವುದು ಹಿಂಬದಿಯಿಂದ ಸೆರೆಹಿಡಿಯಲಾಗಿದೆ.

ಮಗಳ ಮುದ್ದಾಟ ಮತ್ತು ಆಲಿಯಾ ಸೆಲ್ಫಿ

ಮತ್ತೊಂದು ಫೋಟೋದಲ್ಲಿ ಆಲಿಯಾ ಭಟ್ ಅವರು ಕಣ್ಣುಗಳನ್ನು ಮುಚ್ಚಿಕೊಂಡು ಮಗಳು ರಹಾನನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಇದರಲ್ಲಿ ಪುಟಾಣಿ ರಹಾಳ ಪುಟ್ಟ ಕೈಗಳು ತಾಯಿಯ ಮುಖದ ಹತ್ತಿರ ಇರುವುದನ್ನು ಕಾಣಬಹುದು. ಇನ್ನುಳಿದ ಚಿತ್ರಗಳಲ್ಲಿ ಆಲಿಯಾ ಅವರ ವೈಯಕ್ತಿಕ ಫೋಟೋಗಳಿವೆ. ಒಂದರಲ್ಲಿ ಅವರು ಬಿಳಿ ಬಣ್ಣದ ಬಿಕಿನಿ ಟಾಪ್ ಮತ್ತು ಲೇಸ್ ಕವರ್-ಅಪ್ ಧರಿಸಿ ಕನ್ನಡಿ ಸೆಲ್ಫಿ ತಗೆದುಕೊಂಡಿದ್ದಾರೆ. ಮತ್ತೊಂದರಲ್ಲಿ ಕಪ್ಪು ಬಣ್ಣದ ದೊಡ್ಡ ಸನ್‌ಗ್ಲಾಸ್ ಧರಿಸಿ ಪೋಸ್ ನೀಡಿದ್ದಾರೆ. ಆಲ್ಬಮ್‌ನ ಕೊನೆಯ ಚಿತ್ರದಲ್ಲಿ ಅದೇ ಸನ್‌ಗ್ಲಾಸ್ ಧರಿಸಿಯೇ ಆಹಾರ ಸವಿಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:

ಹಳೆಯ ನೆನಪುಗಳ ಆಲ್ಬಮ್

ಆಲಿಯಾ ಭಟ್ ಅವರು ಈ ಸುಂದರ ರಜಾದಿನಗಳನ್ನು ಎಲ್ಲಿ ಕಳೆದರು ಅಥವಾ ಈ ಚಿತ್ರಗಳನ್ನು ಯಾವಾಗ ಕ್ಲಿಕ್ ಮಾಡಲಾಗಿದೆ ಎಂಬ ವಿವರವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ ಅವರು “ಹಳೆಯ ದಿನಗಳು” ಎಂದು ಬರೆದುಕೊಂಡಿರುವುದರಿಂದ, ಇದು ಕೆಲವು ತಿಂಗಳುಗಳ ಹಿಂದೆ ಕಳೆದ ರಜಾದಿನದ ನೆನಪುಗಳಾಗಿವೆ ಎಂದು ತಿಳಿಯಬಹುದು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕೆಲವು ವರ್ಷಗಳ ಕಾಲ ಪ್ರೀತಿಸಿ, ಏಪ್ರಿಲ್ 2022 ರಲ್ಲಿ ವಿವಾಹವಾದರು. ನಂತರ ಅದೇ ವರ್ಷದ ನವೆಂಬರ್‌ನಲ್ಲಿ ಮಗಳು ರಹಾಳನ್ನು ಜಗತ್ತಿಗೆ ಬರಮಾಡಿಕೊಂಡಿದ್ದರು. ಪ್ರಸ್ತುತ ಈ ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !