October 9, 2026
Friday, October 9, 2026
spot_img

ಅಂಪೈರ್ ತೀರ್ಪಿಗೆ RCB ಕೋಚ್ ಗರಂ: ಅಸಭ್ಯ ಪದ ಬಳಸಿದ ಆ್ಯಂಡಿಗೆ ಬಿತ್ತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್‌ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿವಾದಾತ್ಮಕ ಘಟನೆ ನಡೆದಿದ್ದು, ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ದಂಡ ವಿಧಿಸಲಾಗಿದೆ.

ಪಂದ್ಯದ ವೇಳೆ ಮೂರನೇ ಅಂಪೈರ್ ನೀಡಿದ ತೀರ್ಪು ಆರ್‌ಸಿಬಿ ಶಿಬಿರದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕೃನಾಲ್ ಪಾಂಡ್ಯ ಬಾರಿಸಿದ ಚೆಂಡು ಬೌಂಡರಿ ಸಮೀಪ ಕ್ಯಾಚ್ ಆಗಿದೆಯೇ ಎಂಬ ವಿಚಾರ ಪರಿಶೀಲನೆಯ ಬಳಿಕ ಸಿಕ್ಸರ್ ಎಂದು ಪರಿಗಣಿಸಲಿಲ್ಲ. ಇದರಿಂದ ರನ್ ಸಿಗದೆ ಡಾಟ್ ಬಾಲ್ ದಾಖಲಾಗಿತ್ತು.

ಇದನ್ನೂ ಓದಿ:

ಈ ತೀರ್ಪಿನ ಬಳಿಕ ಡಗೌಟ್ ಬಳಿ ನಾಲ್ಕನೇ ಅಂಪೈರ್ ಜೊತೆ ಆ್ಯಂಡಿ ಫ್ಲವರ್ ತೀವ್ರ ಚರ್ಚೆ ನಡೆಸಿದರು. ಈ ವೇಳೆ ಬಳಸಿದ ಕೆಲವು ಅಸಭ್ಯ ಪದಗಳು ಮೈದಾನದ ಮೈಕ್ರೋಫೋನ್‌ನಲ್ಲಿ ದಾಖಲಾಗಿದ್ದವು ಎಂದು ವರದಿಯಾಗಿದೆ.

ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಪಂದ್ಯಾವಳಿಯ ವೇಳೆ ಅಸಭ್ಯ ಭಾಷೆ ಬಳಸುವುದು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದರಡಿ ಲೆವೆಲ್-1 ಅಪರಾಧವಾಗಿ ಪ್ರಕರಣ ದಾಖಲಿಸಿಕೊಂಡ ಮ್ಯಾಚ್ ರೆಫರಿ, ಫ್ಲವರ್‌ಗೆ ಪಂದ್ಯದ ಶುಲ್ಕದ 15 ಶೇಕಡಾ ದಂಡ ವಿಧಿಸಿದ್ದಾರೆ. ಈ ಶಿಕ್ಷೆಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Must Read