October 8, 2026
Thursday, October 8, 2026
spot_img

ಐಪಿಎಲ್‌ನಲ್ಲಿ RCB ಹೊಸ ಇತಿಹಾಸ: 300 ಮಿಲಿಯನ್ ಬ್ರಾಂಡ್ ಮೌಲ್ಯ ದಾಟಿದ ಮೊದಲ ಫ್ರಾಂಚೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಕ್ರಿಕೆಟ್ ಟೂರ್ನಿಯಷ್ಟೇ ಅಲ್ಲ, ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾ ಬ್ರಾಂಡ್‌ಗಳಲ್ಲೊಂದು ಎಂಬುದನ್ನು 2026ರ ಹೊಸ ಅಧ್ಯಯನ ಮತ್ತೊಮ್ಮೆ ಸಾಬೀತುಪಡಿಸಿದೆ.

ಅಮೆರಿಕದ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಐಪಿಎಲ್‌ನ ಒಟ್ಟು ವ್ಯವಹಾರ ಮೌಲ್ಯ ಮೊದಲ ಬಾರಿಗೆ ಸುಮಾರು 2 ಲಕ್ಷ ಕೋಟಿ ತಲುಪಿದ್ದು, ಬ್ರಾಂಡ್ ಮೌಲ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಗ್ರಸ್ಥಾನಕ್ಕೇರಿದೆ.

300 ಮಿಲಿಯನ್ ಗಡಿ ದಾಟಿದ ಮೊದಲ ತಂಡ

ಕಳೆದ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಆರ್‌ಸಿಬಿ, 312 ಮಿಲಿಯನ್ ಡಾಲರ್ (ಅಂದಾಜು 2,600 ಕೋಟಿ) ಬ್ರಾಂಡ್ ಮೌಲ್ಯದೊಂದಿಗೆ ಮೊದಲ ಸ್ಥಾನ ಪಡೆದಿದೆ. ಇದರೊಂದಿಗೆ 300 ಮಿಲಿಯನ್ ಬ್ರಾಂಡ್ ಮೌಲ್ಯ ದಾಟಿದ ಐಪಿಎಲ್‌ನ ಮೊದಲ ಫ್ರಾಂಚೈಸಿ ಎಂಬ ಐತಿಹಾಸಿಕ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ:

ಮುಂಬೈ, ಕೆಕೆಆರ್, ಸಿಎಸ್‌ಕೆ ಟಾಪ್-4ರಲ್ಲಿ

ಬ್ರಾಂಡ್ ಮೌಲ್ಯ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 264 ಮಿಲಿಯನ್ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 245 ಮಿಲಿಯನ್ ಡಾಲರ್‌ನೊಂದಿಗೆ ಮೂರನೇ ಸ್ಥಾನ ಪಡೆದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 244 ಮಿಲಿಯನ್ ಡಾಲರ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪ್ರದರ್ಶನದಲ್ಲಿ ಏರಿಳಿತ ಕಂಡರೂ ಈ ತಂಡಗಳು ತಮ್ಮ ವಾಣಿಜ್ಯ ಬಲವನ್ನು ಉಳಿಸಿಕೊಂಡಿವೆ.

ಉಳಿದ ತಂಡಗಳ ಸ್ಥಾನಮಾನ

ಸನ್‌ರೈಸರ್ಸ್ ಹೈದರಾಬಾದ್ 168 ಮಿಲಿಯನ್ ಡಾಲರ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ (161 ಮಿಲಿಯನ್), ಪಂಜಾಬ್ ಕಿಂಗ್ಸ್ (158 ಮಿಲಿಯನ್), ಗುಜರಾತ್ ಟೈಟಾನ್ಸ್ (157 ಮಿಲಿಯನ್), ಡೆಲ್ಲಿ ಕ್ಯಾಪಿಟಲ್ಸ್ (156 ಮಿಲಿಯನ್) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (122 ಮಿಲಿಯನ್) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ. 2026ರ ವರದಿ ಐಪಿಎಲ್‌ನ ವಾಣಿಜ್ಯ ಶಕ್ತಿ ಹಾಗೂ ಜಾಗತಿಕ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸಿದೆ.

Must Read