ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಯ ವಿಳಂಬವಾದಾಗ ಸಂತ್ರಸ್ತರ ಮನಸ್ಸಿನಲ್ಲಿ ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ ಎಂಬ ಚರ್ಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಅಕ್ಕು ಯಾದವ್ ಪ್ರಕರಣ ಉದಾಹರಣೆಯಾಗಿದೆ. ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ಈತನ ವಿರುದ್ಧ ಸ್ಥಳೀಯರಲ್ಲಿ ದೀರ್ಘಕಾಲದ ಅಸಮಾಧಾನ ಕುದಿಯುತ್ತಲೇ ಇತ್ತು.
ಸ್ಥಳೀಯರ ಆರೋಪಗಳ ಪ್ರಕಾರ, ಮಹಿಳೆಯರ ಮೇಲೆ ಕಿರುಕುಳ, ಬೆದರಿಕೆ ಮತ್ತು ಹಲವು ಅಪರಾಧ ಚಟುವಟಿಕೆಗಳಲ್ಲಿ ಅವನ ಹೆಸರು ಕೇಳಿಬರುತ್ತಿತ್ತು. ಅನೇಕ ದೂರುಗಳು ದಾಖಲಾಗಿದ್ದರೂ ಕಾನೂನು ಕ್ರಮ ಪರಿಣಾಮಕಾರಿಯಾಗಿಲ್ಲ ಎಂಬ ಭಾವನೆ ಜನರಲ್ಲಿ ಗಟ್ಟಿಯಾಗಿತ್ತು. ಪದೇ ಪದೇ ಜಾಮೀನು ಸಿಗುತ್ತಿದ್ದುದೂ ಆಕ್ರೋಶ ಹೆಚ್ಚಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ:
ಈ ಪರಿಸ್ಥಿತಿಯಲ್ಲಿ, 2004ರಲ್ಲಿ ನ್ಯಾಯಾಲಯಕ್ಕೆ ಕರೆತರಲಾದ ವೇಳೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಮತ್ತು ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು. ಮಹಿಳೆಯರ ಗುಂಪು ಆರೋಪಿಯ ಮುಖಕ್ಕೆ ಮೆಣಸಿನ ಪುಡಿ ಎಸೆದು ಕಲ್ಲುಗಳನ್ನು ಎಸೆದರು. ಪೊಲೀಸರಿಂದಲೂ ನಿಯಂತ್ರಿಸಲು ಸಾಧ್ಯವಾಗಲೇ ಓಡಿ ಹೋದರು. ಮಹಿಳೆಯರು ಆತನ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗವನ್ನೇ ಕತ್ತರಿಸಿದರು! ಕಂಡ ಕಂಡಲ್ಲಿ ಅವನ ಮೇಲೆ ಚಾಕುವಿನಿಂದ ಇರಿದರು. ಪರಿಸ್ಥಿತಿ ಹದಗೆಟ್ಟು ಅಕ್ಕು ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಯಿತು.
ಈ ಪ್ರಕರಣದ ಬಳಿಕ ಮಹಿಳೆಯರ ಪರವಾಗಿ ಸಾರ್ವಜನಿಕ ಬೆಂಬಲ ವ್ಯಕ್ತವಾಯಿತು. ನ್ಯಾಯ ಸಿಗದ ನೋವು, ಕಾನೂನು ಮೇಲಿನ ನಿರಾಶೆ ಮತ್ತು ವ್ಯವಸ್ಥೆಯ ವೈಫಲ್ಯ ಜನರನ್ನು ಎಷ್ಟು ಅತಿದೊಡ್ಡ ಹೆಜ್ಜೆಗೆ ತಳ್ಳಬಹುದು ಎಂಬುದಕ್ಕೆ ಈ ಘಟನೆ ಇಂದಿಗೂ ವೈರಲ್ ಆಗುತ್ತಲೇ ಇರುತ್ತದೆ.



