ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರನ್ನು ಪಾಕಿಸ್ತಾನದ ನ್ಯಾಷನಲ್ ಸೈಬರ್ ಕ್ರೈಮ್ಸ್ ಇನ್ವೆಸ್ಟಿಗೇಶನ್ ಏಜೆನ್ಸಿ (NCCIA) ವಿಚಾರಣೆ ನಡೆಸಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲೇ ತಂಡದಿಂದ ಬಿಡುಗಡೆಗೊಂಡ ಏಳು ಆಟಗಾರರ ಪೈಕಿ ರಿಜ್ವಾನ್ ಮತ್ತು ಇಮಾಮ್ ಕೂಡ ಸೇರಿದ್ದರು.
ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನ 194 ರನ್‌ಗಳಿಂದ ಸೋತ ಬಳಿಕ ರಿಜ್ವಾನ್, ಇಮಾಮ್ ಸೇರಿದಂತೆ ಏಳು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿ ತವರಿಗೆ ಕಳುಹಿಸಲಾಗಿತ್ತು. ಬಳಿಕ NCCIA ಮುಂದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ನೀಡಲಾಗಿದ್ದು, ಗುರುವಾರ ಲಾಹೋರ್‌ನಲ್ಲಿರುವ ಏಜೆನ್ಸಿ ಕಚೇರಿಗೆ ಇಬ್ಬರೂ ತೆರಳಿದ್ದಾರೆ. ಕನಿಷ್ಠ ಒಬ್ಬ ಆಟಗಾರ ಹಲವು ಗಂಟೆಗಳ ಕಾಲ NCCIA ಕಚೇರಿಯಲ್ಲೇ ಇದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ಆದರೆ ವಿಚಾರಣೆ ತಂಡದೊಳಗಿನ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದೆ ಎನ್ನಲಾಗಿದ್ದು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಆರಂಭಿಸಿರುವ ಆಂತರಿಕ ಶಿಸ್ತು ವಿಚಾರಣೆಯಾಗಿದೆ.
ವರದಿಯ ಪ್ರಕಾರ, ಕನಿಷ್ಠ ಒಬ್ಬ ಆಟಗಾರನಿಗೆ NCCIA ಪ್ರಶ್ನಾವಳಿಯನ್ನೂ ನೀಡಿದ್ದು, ಮುಂದಿನ ವಾರ ಅದನ್ನು ಪೂರ್ಣಗೊಳಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ. ಲಾರ್ಡ್ಸ್ ಸೋಲಿನ ಬಳಿಕ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಹಾಗೂ ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನೂ ತವರಿಗೆ ಕಳುಹಿಸಲಾಗಿದ್ದು, ಅವರ ಬದಲಿಗೆ ಮೈಕ್ ಹೆಸ್ಸನ್ ಮತ್ತು ಆಶ್ಲೇ ನಾಫ್ಕೆ ಅವರನ್ನು ನೇಮಿಸಲಾಗಿದೆ.



