October 19, 2026
Monday, October 19, 2026
spot_img

ಖಮೇನಿ ಹತ್ಯೆಗೆ ಪ್ರತೀಕಾರ: ಇಸ್ರೇಲ್‌ನ ಬೀಟ್ ಶೆಮೇಶ್‌ ಮೇಲೆ ಇರಾನ್ ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ತೀವ್ರ ಆಕ್ರೋಶಗೊಂಡಿದ್ದು, ಇಸ್ರೇಲ್‌ನ ಬೀಟ್ ಶೆಮೆಶ್‌ನ ಮೇಲೆ ದಾಳಿ ನಡೆಸಿದ್ದು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ .

ಇಸ್ರೇಲ್‌ನಲ್ಲಿರುವ ಬೀಟ್ ಶೆಮೇಶ್ ಒಂದು ನಗರವಾಗಿದ್ದು, ಇದು ಜೆರುಸಲೆಮ್‌ನ ಪಶ್ಚಿಮದಿಂದ 30 ಕಿ.ಮೀ ಅಥವಾ 19 ಮೈಲು ದೂರದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಇಸ್ರೇಲ್‌ನ ವೈದ್ಯಕೀಯ ತುರ್ತು ತಂಡಗಳು ಸ್ಥಳಕ್ಕೆ ಆಗಮಿಸಿವೆ. ಗಾಯಾಳುಗಳನ್ನು ಸ್ಥಳದಿಂದ ತೆರವುಗೊಳಿಸಿ ರಕ್ಷಿಸಲು ಹೆಲಿಕಾಪ್ಟರ್ ಅನ್ನು ಸಹ ಕರೆಸಲಾಗಿದೆ ಎಂದು ವರದಿಯಾಗಿದೆ.

ಬೀಟ್ ಶೆಮೆಶ್ ಮೇಲೆ ನಡೆದ ನೇರ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ ಘಟಕ ಮ್ಯಾಗೆನ್ ಡೇವಿಡ್ ಅಡೋಮ್‌ನ ವಕ್ತಾರ ಜಾಕಿ ಹೆಲ್ಲರ್ ಹೇಳಿದ್ದಾರೆ.

ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಈ ಪ್ರದೇಶದಲ್ಲಿ ವಾಷಿಂಗ್ಟನ್ ಮತ್ತು ಟೆಲ್ ಅವಿವ್‌ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸುವುದಾಗಿ ಎಚ್ಚರಿಸಿದೆ.

Must Read