June 23, 2026
Tuesday, June 23, 2026
spot_img

ಪರವಾನಿಗೆ ಇಲ್ಲದೆ ಶೆಡ್ಯೂಲ್-ಎಚ್ ಔಷಧಗಳ ಮಾರಾಟ: 33,120 ರೂ. ಮೌಲ್ಯದ ಸೊತ್ತು ಸಹಿತ ಮಹಿಳೆಯ ಬಂಧನ

ಹೊಸದಿಗಂತ ವರದಿ ಕಲಬುರಗಿ:

ನಗರದ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪೂನಗರದ ಮಾಂಗರವಾಡಿ ಗಲ್ಲಿಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ‘ಶೆಡ್ಯೂಲ್-ಎಚ್’ ಮಾದರಿಯ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

₹33 ಸಾವಿರಕ್ಕೂ ಹೆಚ್ಚು ಮೌಲ್ಯದ ಔಷಧ ವಶ

ರೇವಮ್ಮ (61) ಬಂಧಿತ ಮಹಿಳೆ. ಈಕೆಯಿಂದ 29,160 ರೂ. ಮೌಲ್ಯದ ನೈಟ್ರಾಜೆಪಾಂ (Nitrazepam) ಮಾತ್ರೆಗಳು ಹಾಗೂ 3,960 ರೂ. ಮೌಲ್ಯದ ಕೊಡೆನ್ ಫಾಸ್ಫೇಟ್ (Codeine phosphate) ಕಫ್ ಸಿರಪ್ ಸೇರಿದಂತೆ ಒಟ್ಟು 33,120 ರೂ. ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:

ಪೊಲೀಸ್ ತಂಡದ ದಾಳಿ ಯಶಸ್ವಿ

ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಪುರ ಪಿಐ ಮಹಾಂತೇಶ ಪಾಟೀಲ ನೇತೃತ್ವದ ಪರಶುರಾಮ, ಉತ್ತಮ್, ಪ್ರಿಯಾ ಮತ್ತು ಗುರುನಾಥ ಅವರನ್ನೊಳಗೊಂಡ ಪೊಲೀಸ್ ತಂಡ ಈ ದಾಳಿ ನಡೆಸಿದ್ದು, ಹಿರಿಯ ಅಧಿಕಾರಿಗಳು ತಂಡವನ್ನು ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !