May 28, 2026
Thursday, May 28, 2026
spot_img

ನೇಣುಬಿಗಿದ ಸ್ಥಿತಿಯಲ್ಲಿ ಎಸ್‌ಡಿಆರ್‌ಎಫ್‌ ಸಿಪಿಐ ಶ*ವ ಪತ್ತೆ: ಪೊಲೀಸ್ ಅಧಿಕಾರಿ ಸಾವಿನ ಸುತ್ತ ಸಂಶಯದ ಕರಿನೆರಳು

ಹೊಸದಿಗಂತ ವರದಿ ಬೆಳಗಾವಿ:

ಎಸ್‌ಡಿಆರ್‌ಎಫ್‌ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಶೈಲ ಚೌಗಲೆ (37) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಸಿಪಿಐ ಶ್ರೀಶೈಲ ಬುಧವಾರ ರಾತ್ರಿ ವೇಳೆ ತಮ್ಮ ಕೆಲಸ ನಿರ್ವಹಿಸಿ ಚನ್ನಮ್ಮ ನಗರದಲ್ಲಿರುವ ಅವರ ನಿವಾಸದಲ್ಲಿ ರಾತ್ರಿ ಮಲಗುವದಾಗಿ ಹೇಳಿ ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದಾರೆ. ಬಳಿಕ ಶ್ರೀಶೈಲ್ ಅವರು ಬೆಳಗ್ಗೆ ಎಳದಿದ್ದಾಗ ಅನುಮಾನಗೊಂಡ ಅವರ ಪತ್ನಿ ತಕ್ಷಣವೇ ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದಾಗ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಶ್ರೀಶೈಲ್ ಅವರ ಶವ ನೇತಾಡುತ್ತಿತ್ತು ಎಂದು ಹೇಳಲಾಗಿದೆ. ನಂತರ ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಹೆಸರುಗಳಿಸಿದ್ದ ಸಿಪಿಐ ಶ್ರೀಶೈಲ್

ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌)ಯ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಶೈಲ ಅವರು, ಇದಕ್ಕೂ ಮೊದಲು ಕಂಗ್ರಾಳಿ ಬಳಿ ಇರುವ ಕೆಎಸ್ ಆರ್ ಪಿ ಪೊಲೀಸ್ ತರಬೇತಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಎಸ್‌ಡಿಆರ್‌ಎಫ್‌ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಲ್ಲಿಯು ಸಹ ಸಾಕಷ್ಟು ಉತ್ತಮ ಕೆಲಸ ನಿರ್ವಹಿಸಿ ಹೆಸರು ಗಳಿಸಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:

ಅಲ್ಲದೇ ಅವರಿಗೆ ಮುಂದಿನ ತಿಂಗಳು ಡಿವೈಎಸ್ಪಿ ಆಗಿ ಪ್ರಮೋಶನ ಕೂಡಾ ಇತ್ತು ಎಂದು ಹೇಳಲಾಗಿದೆ. ಆದರೆ ಓಮ್ಮೆಂದೊಮ್ಮಲೇ ಇಂತಹ ಉತ್ತಮ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ \ಅವರ ಮನೆಯ ನೆರೆಹೊರೆಯವರಿಗೆ ಹಾಗೂ ಸಂಬಂಧಿಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ.

ಸಿಪಿಐ ಶ್ರೀಶೈಲ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಈಗ ಹಲವು ಸಂಶಯಗಳಿಗೆ ಎಡ ಮಾಡಿ ಕೊಟ್ಟಿದೆ. ಸದ್ಯ ಸಿಪಿಐ ಶ್ರೀಶೈಲ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !