June 18, 2026
Thursday, June 18, 2026
spot_img

ಸಿನಿಮಾ ಪ್ರದರ್ಶನ ಸಮಯ ತಿಂಡಿ-ತಿನಿಸು ಮಾರಾಟ ಸರಿಯಲ್ಲ: ಆಮೀರ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರದ ಒಳಗೆ ಸಿನಿಮಾ ಪ್ರದರ್ಶನ ಆಗುತ್ತಿರುವ ಸಮಯದಲ್ಲಿ ತಿಂಡಿ-ತಿನಿಸು ಮಾರಾಟ ಮಾಡುವುದು, ಅಥವಾ ಸೇವೆ ನೀಡುವುದು ಸರಿಯಲ್ಲ ಎಂದು ಬಾಲಿವುಡ್ ನಟ ಆಮಿರ್ ಖಾನ್ ಹೇಳಿದ್ದಾರೆ.

ಮಲ್ಟಿಪ್ಲೆಕ್ಸ್​ಗಳು, ಸಿನಿಮಾ ಟಿಕೆಟ್ ಮಾರಾಟಕ್ಕಿಂತಲೂ ತಿಂಡಿ-ತಿನಿಸು, ಪಾನೀಯಗಳ ಮಾರಾಟಕ್ಕೆ ಹೆಚ್ಚು ಆದ್ಯತೆ ನೀಡುತ್ತವೆ. ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೂ, ಸಿನಿಮಾ ನೋಡುತ್ತಿರುವ ಪ್ರೇಕ್ಷಕರ ಬಳಿ ಬಂದು ಆರ್ಡರ್ ಪಡೆಯುವುದು, ತಿಂಡಿ-ತಿನಿಸುಗಳನ್ನು ಮಾರಲು ಪ್ರಯತ್ನಿಸುವುದು, ಆರ್ಡರ್ ನೀಡಿದ ಪ್ರೇಕ್ಷಕನಿಗೆ ಸರ್ವೀಸ್ ನೀಡುವುದು ಮಾಡಲಾಗುತ್ತದೆ.ಈ ರೀತಿಯ ಸೇವೆಯ ಬಗ್ಗೆ ಆಮಿರ್ ಖಾನ್ ವಿರೋಧ ವ್ಯಕ್ತಪಡಿಸಿರುತ್ತಾರೆ.

ಈ ಬಗ್ಗೆ ನಾನು ಮಲ್ಟಿಪ್ಲೆಕ್ಸ್​ಗಳವರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಸಿನಿಮಾ ಶುರುವಾಗುವ ಮುಂಚೆಯೇ ತಿಂಡಿ-ತಿನಿಸು ತೆಗೆದುಕೊಳ್ಳಬೇಕು ಅಥವಾ ಇಂಟರ್ವೆಲ್ ಸಮಯದಲ್ಲಿ ತೆಗೆದುಕೊಳ್ಳಬೇಕು. ಸಿನಿಮಾ ಪ್ರದರ್ಶನ ಆಗುತ್ತಿರುವ ವೇಳೆ ತಿಂಡಿ-ತಿನಿಸು ಮಾರುವುದು ಸರಿಯಲ್ಲ, ಅದು ಸಿನಿಮಾ ವೀಕ್ಷಣೆಯ ಅನುಭವವನ್ನು ಹಾಳು ಮಾಡುತ್ತದೆ ಎಂದಿದ್ದಾರೆ.

ಮುಂಚೆ ಸಿನಿಮಾ ವೀಕ್ಷಕರಿಗೆ ಹೆಚ್ಚು ಏಕಾಗ್ರತೆ ಇತ್ತು, ಅವರು ಗಮನವಿಟ್ಟು ಸಿನಿಮಾ ವೀಕ್ಷಿಸುತ್ತಿದ್ದರು, ಒಂದೊಮ್ಮೆ ಸಿನಿಮಾ ಅವರಿಗೆ ಇಷ್ಟ ಆಗಲಿಲ್ಲವೆಂದರೆ ಮಧ್ಯದಲ್ಲಿಯೇ ಎದ್ದು ಹೋಗಿಬಿಡುತ್ತಿದ್ದರು. ಆದರೆ ಈಗಿನ ಪ್ರೇಕ್ಷಕರಿಗೆ ಏಕಾಗ್ರತೆ ಇಲ್ಲ, ಸಿನಿಮಾ ನೋಡುವಾಗ ಮೊಬೈಲ್ ನೋಡುತ್ತಾರೆ, ಮೆಸೇಜ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುತ್ತಾರೆ. ಸಿನಿಮಾದ ಮೇಲೆ ಅವರಿಗೆ ಏಕಾಗ್ರತೆಯೇ ಇರುವುದಿಲ್ಲ ಎಂದಿದ್ದಾರೆ.

ಆಮಿರ್ ಖಾನ್ ಅವರು ಈ ಹಿಂದೆ ಒಟಿಟಿಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು. ಒಟಿಟಿ ಮಾಡೆಲ್ ಸರಿಯಿಲ್ಲ, ಇದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಓಡುವುದಿಲ್ಲ ಎಂದಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !