May 16, 2026
Saturday, May 16, 2026
spot_img

ಇರಾನ್‌ ಹಡಗು ಕಂಡ ಕೂಡಲೇ ಗುಂಡು ಹಾರಿಸಿ: ಅಮೆರಿಕದ ನೌಕಾಪಡೆಗೆ ಟ್ರಂಪ್ ಆರ್ಡರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಅದರಲ್ಲೂ ಹಾರ್ಮುಜ್ ಜಲಸಂಧಿಯಲ್ಲಿನ ಇರಾನ್, ಅಮೆರಿಕ ನಡುವಿನ ಕದನ ಮಿತಿ ಮೀರಿದ್ದು, ಇರಾನ್‌ನ ಯಾವುದೇ ಹಡಗುಗಳು ಕಂಡ ಕೂಡಲೇ ಗುಂಡಿಕ್ಕಿ ಹೊಡೆದುರುಳಿಸಲು ಅಮೆರಿಕದ ನೌಕಾಪಡೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಆದೇಶ ನೀಡಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ಮೈನ್ ಅಳವಡಿಸಲು ಸಂಚು ರೂಪಿಸುತ್ತಿರುವ ಇರಾನ್ ವಿರುದ್ಧ ಗುಂಡಿನ ದಾಳಿ ನಡೆಸಲು ನಾನು ನೌಕಾಪಡೆಗೆ ಆದೇಶ ನೀಡಿದ್ದೇನೆ. ಯಾವುದೇ ಹಡಗು ಕಂಡರು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಿ. ಈಗಾಗಲೇ ಹಲವು ಹಡಗುಗಳು ಸಮುದ್ರದ ತಳ ಅಡಿ ಸೇರಿದ್ದು, ಮುಂದೆ ಅನೇಕ ಹಡಗುಗಳು ಸೇರಲಿವೆ ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ.

ಈಗಾಗಲೇ ಜಲಸಂಧಿಯಲ್ಲಿ ಅಮೆರಿಕದ ಸೇನಾ ಬಲ ಕಾರ್ಯಾಚರಣೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮೂರು ಪಟ್ಟು ಪ್ರಮಾಣದಲ್ಲಿ ನೌಕಾಪಡೆ ಸನ್ನದ್ಧ ಆಗಿ ಇರುವಂತೆ ಟ್ರಂಪ್ ಸೂಚನೆ ನೀಡಿದ್ದಾರೆ.

ಟ್ರಂಪ್ ಈ ಆದೇಶ, ಜಾಗತಿಕ ಮಟ್ಟದಲ್ಲಿ ಹೊಸ ಆತಂಕವನ್ನು ಮನೆ ಮಾಡಿದೆ. ದಿನೇ ದಿನೇ ತೈಲ ಮಾರುಕಟ್ಟೆಯ ಮೇಲೆ ಭೀಕರ ಪರಿಣಾಮ ಬೀಳುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !