June 7, 2026
Sunday, June 7, 2026
spot_img

ನಿಮ್ಮ ಕನಸು ಇನ್ನೂ ನನಸಾಗಿರಲಿಲ್ಲ, ತುಂಬ ಬೇಗ ಹೋಗಿಬಿಟ್ರಿ, ಭಾವುಕ ಪೋಸ್ಟ್‌ ಮಾಡಿದ ಶ್ವೇತಾ ಪ್ರಸಾದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಮ್ಮ ಕನಸು ಇನ್ನೂ ನನಸಾಗಿರಲಿಲ್ಲ ಇಷ್ಟು ಬೇಗ ಯಾಕೆ ಹೋದ್ರಿ ಸರ್‌? ಎಂದು ನಟಿ ಶ್ವೇತಾ ಪ್ರಸಾದ್‌ ಭಾವುಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ಲವ್‌ ಮಾಕ್ಟೇಲ್‌ ೩ ಸಿನಿಮಾದಲ್ಲಿ ಪತಿ ಪತ್ನಿಯಾಗಿ ಅಭಿನಯಿಸಿದ ಶ್ವೇತಾ ಹಾಗೂ ದಿಲೀಪ್‌ ರಾಜ್‌ ಸೆಟ್‌ನಲ್ಲಿ ಅನ್ಯೂನ್ಯವಾಗಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಶ್ವೇತಾ ದಿಲೀಪ್‌ ಬಗ್ಗೆ ಮಾತನಾಡಿದ್ದಾರೆ.

ಈ ಶಾಕಿಂಗ್‌ ಸುದ್ದಿಯನ್ನು ಕೇಳುತ್ತಾ ಎದ್ದೆ. ಇದನ್ನು ನನಗೆ ಅರಗಿಸಿಕೊಳ್ಳಳಾಗುತ್ತಿಲ್ಲ. ಸಿನಿಮಾದಲ್ಲಿ ನಮಗೆ ಹೆಚ್ಚು ಸೀನ್ಸ್‌ ಒಟ್ಟಿಗೇ ಸಿಕ್ಕಿಲ್ಲ. ಆದರೆ ಯಾವಾಗ ಫ್ರೀಯಾಗಿ ಕೂತಿದ್ದರೂ ತಮ್ಮ ಹೆಂಡತಿ,ಮಕ್ಕಳ ಬಗ್ಗೆ ಮಾತನಾಡ್ತಾ ಇದ್ದರು. ಅವರು ಅದ್ಭುತ ತಂದೆ. ಅವರ ಕುಟುಂಬದವರ ಸ್ಥಿತಿಯನ್ನು ಊಹಿಸಿಕೊಳ್ಳೋದಕ್ಕೂ ಆಗೋದಿಲ್ಲ. ಅವರಿಗೆ ದೇವರು ಈ ನಷ್ಟವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ.

ಯಾವಾಗಲಾದ್ರೂ ಸರ್‌ ನೀವು ಅದ್ಭುತ ನಟ ಎಂದು ಹೇಳಿದ್ರೆ, ಅಯ್ಯೋ ಇಲ್ಲಮ್ಮಾ ಎಂದು ನಗುತ್ತಾ, ನನಗಿನ್ನೂ ದೊಡ್ಡ ಬ್ರೇಕ್‌ ಸಿಗಬೇಕು. ಅದು ನನ್ನ ಕನಸು ಎಂದು ಹೇಳುತ್ತಿದ್ದರು ಎಂದು ಪೋಸ್ಟ್‌ ಮಾಡಿದ್ದಾರೆ.

ಅವರು ದೊಡ್ಡ ಬ್ರೇಕ್‌ಗಾಗಿ ಕಾಯುತ್ತಿದ್ದರು. ಅದು ಸಿಗುವ ಮುನ್ನವೇ ಮರೆಯಾಗಿದ್ದಾರೆ. ಜೀವನ ಒಂದು ಕ್ಷಣ ಹೀಗಿದೆ ಎಂದುಕೊಳ್ಳುವಲ್ಲಿ ಇನ್ನೇನೋ ಆಗಿಬಿಡುತ್ತದೆ. ಇದು ಕ್ಷಣಿಕ ಅಷ್ಟೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !