July 27, 2026
Monday, July 27, 2026
spot_img

FAT LOSS | ನಿಮ್ಮ ದೇಹದಲ್ಲಿ ಫ್ಯಾಟ್‌ ಕರಗ್ತಾ ಇದೆ ಅಂದ್ರೆ ಈ ಲಕ್ಷಣಗಳು ಕಾಣಿಸುತ್ತವೆ ನೋಡಿ..

ಜಿಮ್‌ಗೆ ಹೋಗೋಕೆ ಶುರು ಮಾಡಿ ವಾರಗಳಾಯ್ತು, ಮನೆಯಲ್ಲಿಯೇ ಡಯಟ್‌ ಹಾಗೂ ವರ್ಕೌಟ್‌ ಮಾಡ್ತಾ ಇದ್ದೀನಿ ಆದರೆ ನನ್ನ ದೇಹದ ಫ್ಯಾಟ್‌ ಕಡಿಮೆಯಾಗಿ ಮಸಲ್‌ ಬೆಳೆಯುತ್ತಿದೆಯೋ ಇಲ್ಲವೋ ಗೊತ್ತಾಗ್ತಾ ಇಲ್ಲ ಅನ್ನೋದಾದ್ರೆ ಇದನ್ನು ಓದಿ. ನಿಮ್ಮ ದೇಹದಲ್ಲಿ ಫ್ಯಾಟ್‌ ಕರಗಿ ಹೋಗ್ತಾ ಇದೆ ಅಂದ್ರೆ ಈ ಸೂಚನೆಗಳನ್ನು ದೇಹ ನೀಡುತ್ತದೆ. ಯಾವುದು ನೋಡಿ..


ಪದೇ ಪದೆ ಮೂತ್ರವಿಸರ್ಜನೆಗೆ ಹೋಗಬೇಕು ಎನಿಸುತ್ತದೆ. ಫ್ಯಾಟ್‌ ಕರಗಿರುವ ವೇಸ್ಟ್‌ನ್ನು ದೇಹ ಹೊರಕ್ಕೆ ಹಾಕುತ್ತದೆ.

ನಿಮ್ಮ ಮೂತ್ರವಿಸರ್ಜನೆಯಿಂದ ಬರುವ ವಾಸನೆ ಕೂಡ ಬದಲಾದಂತೆ ಅನಿಸುತ್ತದೆ. ಸ್ವಲ್ಪ ಸ್ಟ್ರಾಂಗ್‌ ಆದ ವಾಸನೆ.

ಮಾಮೂಲಿಗಿಂತ ಜಾಸ್ತಿ ಚಳಿ ಎನಿಸುತ್ತದೆ.ಫ್ಯಾಟ್‌ ಕಡಿಮೆ ಇದ್ದರೆ ಬೇಗ ಚಳಿಯಾಗುತ್ತದೆ.

ರಾತ್ರಿ ಮಲಗಿದಾಗ ಏನೇನೋ ವಿಚಿತ್ರವಾದ ಒಂದಕ್ಕೊಂದು ಸಂಬಂಧವಿಲ್ಲದ ಕನಸುಗಳು ಬೀಳುತ್ತವೆ. ಇದು ಹಾರ್ಮೋನ್‌ ಚೇಂಜ್‌ ಆಗುತ್ತಿರುವ ಲಕ್ಷಣ.

ನಿಮ್ಮ ದೇಹದಿಂದ ಯಾವುದೇ ಆಕ್ಟಿವಿಟಿ ಇಲ್ಲದ ಸಮಯದಲ್ಲಿಯೂ ಬೆವರು ಬರುತ್ತದೆ.

ನಿಮಗೆ ಸುಸ್ತಾಗುತ್ತಿರುತ್ತದೆ. ಆದರೂ ಅದ್ಯಾವುದೋ ಒಂದು ಎನರ್ಜಿ ಇದ್ದಂತೆ ಭಾಸವಾಗುತ್ತದೆ.

ಎಲ್ಲ ಊಟದಲ್ಲಿಯೂ ಉಪ್ಪು ಕಡಿಮೆ ಇರಲಿ ಎನಿಸುತ್ತದೆ. ಹೊಟ್ಟೆ ಬ್ಲೋಟ್‌ ಆಗುತ್ತದೆ.

ಜಾಯಿಂಟ್‌ ನೋವುಗಳು ಕಡಿಮೆಯಾಗುತ್ತದೆ. ತೂಕ ಕಡಿಮೆಯಾದಷ್ಟು ಜಾಯಿಂಟ್ಸ್‌ಗೆ ಯಾವುದೇ ತೂಕ ಬೀಳೋದಿಲ್ಲ.

ತೂಕ ಜಾಸ್ತಿ ಇಳಿದಿಲ್ಲ ಎನಿಸಿದರೂ ಇಂಚ್‌ ಕಡಿಮೆಯಾಗಿರುತ್ತದೆ. ಬಟ್ಟೆಗಳು ಸರಿಯಾಗಿ ಫಿಟ್‌ ಆಗುತ್ತವೆ.

ಯಾವಾಗಲೂ ಬಾಯಾರಿಕೆ ಆಗುತ್ತದೆ. ನೀರು ಕುಡಿಯುವವರೆಗೂ ಸಮಾಧಾನ ಆಗೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !