June 13, 2026
Saturday, June 13, 2026
spot_img

Skin Care | ಬ್ಯೂಟಿ ಪಾರ್ಲರ್ ಬೇಡ, ಕೆಮಿಕಲ್ ಬೇಡ: ಮಿಂಚುವ ತ್ವಚೆಗೆ ಇಲ್ಲಿದೆ ‘ಮೊಸರಿನ’ ಫೇಸ್ ಪ್ಯಾಕ್

ಮೊಸರು ಕೇವಲ ಊಟದ ರುಚಿ ಹೆಚ್ಚಿಸುವ ಆಹಾರ ಮಾತ್ರವಲ್ಲ, ನೈಸರ್ಗಿಕವಾಗಿ ಸೌಂದರ್ಯವನ್ನು ವೃದ್ಧಿಸುವ ಒಂದು ಅದ್ಭುತ ಔಷಧಿಯೂ ಹೌದು. ಕೆಮಿಕಲ್ ಯುಕ್ತ ಬ್ಯೂಟಿ ಪ್ರಾಡಕ್ಟ್‌ಗಳಿಗೆ ಹೋಲಿಸಿದರೆ ಯಾವುದೇ ಅಡ್ಡಪರಿಣಾಮವಿಲ್ಲದೆ ಚರ್ಮ ಮತ್ತು ಕೂದಲಿನ ಆರೈಕೆ ಮಾಡಲು ಮೊಸರು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಸಿಡ್, ಜಿಂಕ್ ಹಾಗೂ ಅಗತ್ಯ ವಿಟಮಿನ್‌ಗಳು ಮುಖದ ಮೇಲಿನ ಕಲೆಗಳನ್ನು ನಿವಾರಿಸಿ ನೈಸರ್ಗಿಕ ಹೊಳಪು ನೀಡುವುದಲ್ಲದೆ, ಕೂದಲಿನ ಬುಡವನ್ನು ಗಟ್ಟಿಗೊಳಿಸಿ ತಲೆಹೊಟ್ಟು ನಿವಾರಿಸುವಲ್ಲಿ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಮುಖದ ಕಾಂತಿ ಹೆಚ್ಚಿಸಲು

ಚಮಚ ಮೊಸರಿಗೆ 1 ಚಮಚ ಕಡಲೆಹಿಟ್ಟು (Besan) ಮತ್ತು ಚಿಟಿಕೆ ಅರಿಶಿನ ಪುಡಿ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ಇದು ಮುಖದ ಮೇಲಿನ ಜಿಡ್ಡು ಮತ್ತು ಕೊಳೆಯನ್ನು ತೆಗೆದುಹಾಕಿ ತಕ್ಷಣದ ಹೊಳಪು ನೀಡುತ್ತದೆ.

ಕಪ್ಪು ಕಲೆ ಮತ್ತು ಟ್ಯಾನ್ ನಿವಾರಣೆಗೆ

ಮೊಸರಿಗೆ ಕೆಲವು ಹನಿ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಮುಖಕ್ಕೆ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದರಿಂದ ಬಿಸಿಲಿನಿಂದ ಕಪ್ಪಾದ ಚರ್ಮದ (Sun Tan) ಬಣ್ಣವನ್ನು ತಿಳಿಗೊಳಿಸಲು ಮತ್ತು ಮೊಡವೆ ಕಲೆಗಳನ್ನು ಮರೆಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ:

ಒಣ ತ್ವಚೆಯ ತೇವಾಂಶಕ್ಕೆ

ಕೇವಲ ಗಟ್ಟಿ ಮೊಸರನ್ನು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ 5 ನಿಮಿಷ ಮಸಾಜ್ ಮಾಡಿ, ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದು ಚರ್ಮಕ್ಕೆ ಆಳವಾದ ತೇವಾಂಶ (Hydration) ನೀಡಿ, ಒಣ ತ್ವಚೆಯ ಸಮಸ್ಯೆಯನ್ನು ದೂರ ಮಾಡುತ್ತದೆ.

ತಲೆಹೊಟ್ಟು ನಿವಾರಣೆಗೆ

ಅರ್ಧ ಕಪ್ ಮೊಸರಿಗೆ 1 ಚಮಚ ನಿಂಬೆ ರಸ ಅಥವಾ ನೆಲ್ಲಿಕಾಯಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿನ ಬುಡಕ್ಕೆ (Scalp) ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ಮೈಲ್ಡ್ ಶಾಂಪೂ ಬಳಸಿ ತೊಳೆಯಬೇಕು. ಮೊಸರಿನಲ್ಲಿರುವ ಆಂಟಿ-ಫಂಗಲ್ ಗುಣಗಳು ತಲೆಯಲ್ಲಿರುವ ಹೊಟ್ಟು ಮತ್ತು ತುರಿಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.

ರೇಷ್ಮೆಯಂತಹ ಮೃದು ಕೂದಲಿಗೆ

ಮೊಸರಿಗೆ ಒಂದು ಹಣ್ಣಾದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಸೇರಿಸಿ ಹೇರ್ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚಿ. 40 ನಿಮಿಷಗಳ ನಂತರ ಶಾಂಪೂ ಮಾಡಿದರೆ. ಕೂದಲಿಗೆ ಅತ್ಯುತ್ತಮ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಒಣಗಿದ ಹಾಗೂ ಜೀವವಿಲ್ಲದ ಕೂದಲನ್ನು ಮೃದು ಮತ್ತು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !