June 14, 2026
Sunday, June 14, 2026
spot_img

SMART TIPS | ಮಳೆಯಲ್ಲಿ ಮೊಬೈಲ್ ಒದ್ದೆಯಾಗಿದ್ಯಾ? ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗೆ ಇಲ್ಲಿದೆ ಸೂಪರ್ ಟಿಪ್ಸ್

ಮಳೆಗಾಲ ಆರಂಭವಾಯಿತೆಂದರೆ ಸಾಕು, ಜಿಟಿಜಿಟಿ ಮಳೆಯಲ್ಲಿ ನೆನೆಯುವುದು ಎಷ್ಟು ಮುದ ನೀಡುತ್ತದೆಯೋ, ಅಷ್ಟೇ ಆತಂಕ ತರುವುದು ಜೇಬಿನಲ್ಲಿರುವ ಮೊಬೈಲ್. ಆಕಸ್ಮಿಕವಾಗಿ ಮೊಬೈಲ್ ಮಳೆಯಲ್ಲಿ ನೆನೆದರೆ ಅಥವಾ ನೀರಿನಲ್ಲಿ ಬಿದ್ದರೆ ಬಹುತೇಕರು ಗಾಬರಿಯಾಗುತ್ತಾರೆ. ಆದರೆ, ಅಂತಹ ಸಮಯದಲ್ಲಿ ಗಾಬರಿಯಾಗದೆ ತಕ್ಷಣವೇ ಕೆಲವು ಸರಿಯಾದ ಕ್ರಮಗಳನ್ನು ಕೈಗೊಂಡರೆ ಫೋನ್ ಹಾಳಾಗದಂತೆ ಶಾಶ್ವತವಾಗಿ ಉಳಿಸಿಕೊಳ್ಳಬಹುದು. ನಿಮ್ಮ ಫೋನ್ ನೀರಿನಲ್ಲಿ ನೆನೆದಾಗ ತಕ್ಷಣವೇ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ.

ಫೋನ್ ನೆನೆದ ತಕ್ಷಣ ಮಾಡಬೇಕಾದ ಕೆಲಸಗಳು:

ಫೋನ್ ನೆನೆದ ತಕ್ಷಣ ಮೊದಲು ಮಾಡಬೇಕಾದ ಕೆಲಸವೆಂದರೆ ಅದನ್ನು ಸ್ವಿಚ್ ಆಫ್ ಮಾಡುವುದು. ಫೋನ್ ಆನ್ ಆಗಿದ್ದರೆ ಒಳಗಿನ ಮದರ್‌ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯ ಹೆಚ್ಚು.

ಫೋನ್‌ನ ಬ್ಯಾಟರಿ ಹೊರತೆಗೆಯಲು ಸಾಧ್ಯವಿದ್ದರೆ ತಕ್ಷಣ ತೆಗೆಯಬೇಕು. ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಮತ್ತು ಫೋನ್ ಬ್ಯಾಕ್ ಕವರ್ ಅನ್ನು ತಕ್ಷಣ ಹೊರಗೆ ತೆಗೆದು ಪ್ರತ್ಯೇಕವಾಗಿ ಒಣಗಿಸಬೇಕು.

ಒಣ ಬಟ್ಟೆಯಿಂದ ಒರೆಸುವುದು:

ಮೃದುವಾದ ಕಾಟನ್ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆ ಬಳಸಿ ಫೋನ್ ಮೇಲಿರುವ ನೀರನ್ನು ನಿಧಾನವಾಗಿ ಒರೆಸಿ. ಆ ಸಮಯದಲ್ಲಿ ಫೋನ್ ಅನ್ನು ಜೋರಾಗಿ ಅಲ್ಲಾಡಿಸಬಾರದು, ಇದರಿಂದ ಹೊರಗಿರುವ ನೀರು ಒಳಗಿನ ಭಾಗಗಳಿಗೆ ಹರಡಬಹುದು.

ಇದನ್ನೂ ಓದಿ:

ಅಕ್ಕಿ ಡಬ್ಬದ ಮ್ಯಾಜಿಕ್:

ಫೋನ್‌ನ ಹೊರಭಾಗವನ್ನು ಒರೆಸಿದ ನಂತರ, ಅದನ್ನು ಒಂದು ಒಣಗಿದ ಅಕ್ಕಿ ತುಂಬಿದ ಡಬ್ಬದೊಳಗೆ ಕನಿಷ್ಠ 24 ರಿಂದ 48 ಗಂಟೆಗಳ ಕಾಲ ಇಡಬೇಕು. ಅಕ್ಕಿಯು ಫೋನ್ ಒಳಗಿರುವ ತೇವಾಂಶವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ.

ಸಿಲಿಕಾ ಜೆಲ್ ಪ್ಯಾಕೆಟ್‌ಗಳ ಬಳಕೆ:

ನಿಮ್ಮ ಬಳಿ ಸಿಲಿಕಾ ಜೆಲ್ ಪ್ಯಾಕೆಟ್‌ಗಳಿದ್ದರೆ, ಒಂದು ಬಾಕ್ಸ್‌ನಲ್ಲಿ ಫೋನ್ ಜೊತೆ ಈ ಪ್ಯಾಕೆಟ್‌ಗಳನ್ನು ಹಾಕಿ ಮುಚ್ಚಿಡಬೇಕು. ಇದು ಅಕ್ಕಿಗಿಂತ ಅತ್ಯಂತ ವೇಗವಾಗಿ ತೇವಾಂಶವನ್ನು ಹೀರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !