October 7, 2026
Wednesday, October 7, 2026
spot_img

SNACKS| ಬಾಯಲ್ಲಿ ನೀರೂರಿಸುವ ಗರಿಗರಿಯಾದ ಆಲೂ ಸ್ಯಾಂಡ್‌ವಿಚ್: ಇಷ್ಟು ಸುಲಭವಾಗಿ ಮಾಡಬಹುದಾ?

ಮನೆಯಲ್ಲಿಯೇ ಇರುವ ಆಲೂಗಡ್ಡೆ ಮತ್ತು ಬ್ರೆಡ್ ಬಳಸಿ ಬಾಯಲ್ಲಿ ನೀರೂರಿಸುವಂತಹ, ಗರಿಗರಿಯಾದ ಆಲೂ ಸ್ಯಾಂಡ್‌ವಿಚ್ ಅನ್ನು ಕೇವಲ ಹತ್ತೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಹೊರಗಡೆ ಕ್ರಿಸ್ಪಿ ಹಾಗೂ ಒಳಗಡೆ ಮಸಾಲೆಯುಕ್ತ ಆಲೂಗಡ್ಡೆ ಸ್ಟಫಿಂಗ್ ಇರುವ ಈ ಸ್ಯಾಂಡ್‌ವಿಚ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ

ಬ್ರೆಡ್ ಸ್ಲೈಸ್‌ಗಳು

ಈರುಳ್ಳಿ

ಹಸಿ ಮೆಣಸಿನಕಾಯಿ:

ಖಾರದ ಪುಡಿ

ಗರಂ ಮಸಾಲೆ

ಆಮ್‌ಚೂರ್ ಪುಡಿ ಅಥವಾ ಚಾಟ್ ಮಸಾಲೆ

ಸಾಸಿವೆ

ಜೀರಿಗೆ

ಅರಿಶಿನ

ಬೆಣ್ಣೆ ಅಥವಾ ಎಣ್ಣೆ

ಕೊತ್ತಂಬರಿ ಸೊಪ್ಪು

ಉಪ್ಪು

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ, ಸಾಸಿವೆ, ಜೀರಿಗೆ ಮತ್ತು ಹಸಿರು ಮೆಣಸಿನಕಾಯಿ ಒಗ್ಗರಣೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಇದಕ್ಕೆ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ ಮತ್ತು ಉಪ್ಪು ಸೇರಿಸಿ ಕೈಯಾಡಿಸಿ. ಬಳಿಕ ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ. ಆಲೂ ಪಲ್ಯ ಸಿದ್ಧ.

ಇದನ್ನೂ ಓದಿ:

ನಂತರ ಎರಡು ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು. ಸಿದ್ಧಪಡಿಸಿದ ಆಲೂಗಡ್ಡೆ ಪಲ್ಯವನ್ನು ಒಂದು ಬ್ರೆಡ್ ಸ್ಲೈಸ್ ಮೇಲೆ ಸಮನಾಗಿ ಹರಡಿ.ಇನ್ನೊಂದು ಬ್ರೆಡ್ ಸ್ಲೈಸ್‌ನಿಂದ ಅದನ್ನು ಮುಚ್ಚಿ, ತವಾ ಅಥವಾ ಸ್ಯಾಂಡ್‌ವಿಚ್ ಮೇಕರ್ ಅನ್ನು ಬಿಸಿ ಮಾಡಿ. ಬ್ರೆಡ್‌ನ ಎರಡು ಬದಿಗಳಿಗೆ ಬೆಣ್ಣೆ ಅಥವಾ ತುಪ್ಪ ಸವರಿ. ತವಾದ ಮೇಲೆ ಬ್ರೆಡ್ ಇಟ್ಟು, ಎರಡು ಕಡೆ ಚೆನ್ನಾಗಿ ಕಂದು ಬಣ್ಣ ಬಂದು ಕ್ರಿಸ್ಪಿ ಆಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿದರೆ, ಬಿಸಿಬಿಸಿಯಾದ ಆಲೂ ಸ್ಯಾಂಡ್‌ವಿಚ್ ಸಿದ್ಧ.

Must Read