September 16, 2026
Wednesday, September 16, 2026
spot_img

ಅತಿಯಾದ ನಿರೀಕ್ಷೆ ಇಟ್ಟುಕೊಳ್ಳೋದು ಕೆಲವೊಮ್ಮೆ ನಮ್ಮ ತಪ್ಪೇ ಆಗಿಬಿಡುತ್ತೆ ಅಲ್ವಾ?

ಕೆಲವರಿಂದ ನಾವು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುತ್ತೇವೆ. ಅವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ನಮ್ಮ ಜೊತೆ ಇರುತ್ತಾರೆ, ನಾವು ಕೊಡುವ ಪ್ರೀತಿ, ಕಾಳಜಿಗೆ ಅದೇ ರೀತಿಯ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಮನಸ್ಸು ನಂಬಿಬಿಡುತ್ತದೆ. ಆದರೆ ಬದುಕು ಯಾವಾಗಲೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ.

ನಿರೀಕ್ಷೆ ಹೆಚ್ಚಾದಷ್ಟೂ ಸಣ್ಣ ನಿರ್ಲಕ್ಷ್ಯವೂ ದೊಡ್ಡ ನೋವಾಗಿ ತೋರುತ್ತದೆ. ಒಂದು ಕರೆ ಬರದಿದ್ದರೂ, ಒಂದು ಸಂದೇಶಕ್ಕೆ ಉತ್ತರ ಸಿಗದಿದ್ದರೂ, ಒಂದು ಮಾತಿನಲ್ಲಿ ಕಾಳಜಿ ಕಾಣಿಸದಿದ್ದರೂ ಮನಸ್ಸು ಮುರಿದುಹೋಗುತ್ತದೆ. ಸಮಸ್ಯೆ ಅವರು ಕೆಟ್ಟವರು ಅನ್ನೋದಲ್ಲ… ನಾವು ಅವರಿಂದ ನಮ್ಮ ಹೃದಯಕ್ಕೆ ತಕ್ಕಷ್ಟು ಜಾಗ ನಿರೀಕ್ಷಿಸಿದ್ದೇವೆ ಅನ್ನೋದೇ ಸತ್ಯ.

ಇದನ್ನೂ ಓದಿ:

ಕೆಲವೊಮ್ಮೆ ನಾವು ಕೊಡುವಷ್ಟು ಎಲ್ಲರೂ ಕೊಡಲಾರರು. ನಾವು ಯೋಚಿಸುವ ಆಳದಲ್ಲಿ ಎಲ್ಲರೂ ಯೋಚಿಸಲಾರರು. ಅದನ್ನು ಅರ್ಥ ಮಾಡಿಕೊಂಡ ಕ್ಷಣದಿಂದ ಮನಸ್ಸು ಸ್ವಲ್ಪ ಹಗುರವಾಗುತ್ತದೆ.

ಪ್ರೀತಿ ಇರಲಿ, ಸ್ನೇಹ ಇರಲಿ, ಸಂಬಂಧ ಇರಲಿ… ನಿರೀಕ್ಷೆ ಕಡಿಮೆಯಾದಷ್ಟು ಮನಶಾಂತಿ ಹೆಚ್ಚು. ಯಾಕೆಂದರೆ ಸಂತೋಷ ಬಹಳ ಬಾರಿ ಬೇಕಾದಾಗ ಬರುವುದಿಲ್ಲ; ನಾವು ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ ಲೆಕ್ಕಾಚಾರಗಳನ್ನು ಬಿಡುವುದರಿಂದ ಬರುತ್ತದೆ.

ಎಲ್ಲರಿಗೂ ಜಾಗ ಕೊಡಿ… ಆದರೆ ನಿಮ್ಮ ಮನಸ್ಸಿನ ಶಾಂತಿಯನ್ನು ಯಾರ ಕೈಯಲ್ಲೂ ಇಡಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !