August 7, 2026
Friday, August 7, 2026
spot_img

9ನೇ ದಿನವೂ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ಸ್ಪೈಡರ್ ಮ್ಯಾನ್’; ಭಾರತದಲ್ಲಿ ಮುಂದುವರಿದ ಕಲೆಕ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ವೆಲ್ ಸಿನಿಮಾಟಿಕ್ ಯೂನಿವರ್ಸ್‌ನ ಬಹುನಿರೀಕ್ಷಿತ ಚಿತ್ರ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಬಿಡುಗಡೆಯಾದ ದಿನದಿಂದಲೇ ದಾಖಲೆ ಬರೆಯುತ್ತಾ ಬಂದಿರುವ ಈ ಸೂಪರ್ ಹೀರೋ ಸಿನಿಮಾ, 9ನೇ ದಿನವಾದ ಶುಕ್ರವಾರವೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

9ನೇ ದಿನದ ಗಳಿಕೆ ಎಷ್ಟು?

ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ (Sacnilk) ಮಾಹಿತಿಯ ಪ್ರಕಾರ, ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರವು ತನ್ನ 9ನೇ ದಿನ ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಒಟ್ಟು 7,513 ಪ್ರದರ್ಶನಗಳನ್ನು ಹೊಂದಿರುವ ಈ ಚಿತ್ರವು ಶೇಕಡಾ 39.3 ರಷ್ಟು ಆಕ್ಯುಪೆನ್ಸಿ ಕಾಯ್ದುಕೊಂಡಿದೆ. ಈ ಮೂಲಕ ಎರಡನೇ ವಾರದಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ 400 ಕೋಟಿ ಕ್ಲಬ್ ಸೇರಿದ ಸಿನಿಮಾ!

ಕೇವಲ ಎಂಟು ದಿನಗಳಲ್ಲಿ ಮೊದಲ ವಾರದಲ್ಲೇ ಈ ಸಿನಿಮಾ ಭಾರತದಲ್ಲಿ ಬರೋಬ್ಬರಿ 400 ಕೋಟಿಗೂ ಅಧಿಕ ಗ್ರೂಸ್ಕಲೆಕ್ಷನ್ ಮಾಡಿ ಐತಿಹಾಸಿಕ ಮೈಲಿಗಲ್ಲು ತಲುಪಿದೆ. ಇಂಗ್ಲಿಷ್ ಜತೆಗೆ ವಿವಿಧ ಭಾಷೆಗಳಲ್ಲೂ ಬಿಡುಗಡೆಯಾಗಿರುವ ಕಾರಣ, ಪ್ರಾದೇಶಿಕ ಮಾರುಕಟ್ಟೆಗಳಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:

ಜಾಗತಿಕ ಮಟ್ಟದಲ್ಲೂ ದಾಖಲೆ ಬರೆಯುತ್ತಿರುವ ಸ್ಪೈಡಿ

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಟಾಮ್ ಹಾಲೆಂಡ್ ಮತ್ತು ಜೆಂಡಾಯಾ ನಟನೆಯ ಈ ಸಿನಿಮಾ ಭಾರಿ ಸೌಂಡ್ ಮಾಡುತ್ತಿದೆ. ಈಗಾಗಲೇ ವಿಶ್ವಾದ್ಯಂತ 1.188 ಬಿಲಿಯನ್ ಡಾಲರ್ ಗಳಿಕೆ ಮಾಡುವ ಮೂಲಕ 2026ರ ಅತ್ಯಧಿಕ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರಕ್ಕೆ ವಾರಾಂತ್ಯದಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !