May 9, 2026
Saturday, May 9, 2026
spot_img

VIRAL | ಕುಡಿದು ಬಂದಿದ್ದ ಕಸ್ಟಮರ್‌ಗೆ ಟೆಸ್ಟ್‌ಡ್ರೈವ್‌ ಕಾರ್‌ಕೊಟ್ಟ ಸಿಬ್ಬಂದಿ, ನಾಲ್ಕು ವಾಹನ ಮಟಾಶ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾರ್‌ ಶೋ ರೂಂ ಸಿಬ್ಬಂದಿಯೊಬ್ಬರು ಕುಡಿದ ಕಸ್ಟಮರ್‌ಗೆ ಕಾರ್‌ ನೀಡಿ ಟೆಸ್ಟ್‌ ಡ್ರೈವ್‌ ಹೋಗಿ ಎಂದಿದ್ದಾರೆ. ಈ ವೇಳೆ ಕುಡಿದು ಗಾಡಿ ಚಲಾಯಿಸಿದ ವ್ಯಕ್ತಿಯಿಂದ ನಾಲ್ಕು ಇತರೆ ಕಾರುಗಳು ಜಖಂ ಆಗಿವೆ.

ಬೆಂಗಳೂರಿನ ಮಹದೇವಪುರದ ವಿಜ್ಞೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.

ಮಹೀಂದ್ರಾ ಕಾರು ಶೋರೂಂಗೆ ಬಂದಿದ್ದ ಅಭಿಲಾಷ್ ಎಂಬಾತ ಕಾರು ಖರೀದಿಸುವ ಉದ್ದೇಶದಿಂದ ತೆರಳಿದ್ದ. ಆದರೆ, ಆತ ಮದ್ಯ ಸೇವಿಸಿರುವುದು ತಿಳಿದಿದ್ದರೂ ಶೋರೂಂ ಸಿಬ್ಬಂದಿ ಆತನಿಗೆ ಟೆಸ್ಟ್ ಡ್ರೈವ್ ಮಾಡಲು ಕಾರನ್ನು ನೀಡಿದ್ದಾರೆ. ಕಾರು ಹತ್ತಿದ ಅಭಿಲಾಷ್ ಮದ್ಯದ ಅಮಲಿನಲ್ಲಿ ಮನಸೋ ಇಚ್ಛೆ ವಾಹನ ಚಲಾಯಿಸಿದ್ದಾನೆ. ಈ ವೇಳೆ ರಸ್ತೆಯಲ್ಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ಇದರಿಂದಾಗಿ ರಮೇಶ್‌ ಎನ್ನುವ ವ್ಯಕ್ತಿಯ ಕಾಲು ಮುರಿದಿದೆ. ಮಹದೇವಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ ಹಿನ್ನೆಲೆಯಲ್ಲಿ ಬಿಎನ್ಎಸ್ ಸೆಕ್ಷನ್ 125(a), 281 ಹಾಗೂ ಐಎಂವಿ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮದ್ಯಪಾನ ಮಾಡಿದ್ದರು ಎಂದು ಗೊತ್ತಿದ್ದರೂ ಕಾರನ್ನು ನೀಡಿದ ಶೋರೂಂ ಸಿಬ್ಬಂದಿ ಬಗ್ಗೆಯೂ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !