ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ಬೆಳಗ್ಗೆ ಮದ್ಯಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಬೀರ್ ಹಾಗೂ ವಿಸ್ಕಿಯ ದರ ಇಳಿಕೆಯಾಗಿದೆ.
ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಶೇ. 20-25ರಷ್ಟು ಇಳಿಕೆಯಾಗಿದೆ. ಆಲ್ಕೋಹಾಲ್ ಇನ್ ಬೆವರೇಜ್ ನೀತಿ ಅನ್ವಯ ಹೊಸ ದರ ಬಿಡುಗಡೆಯಾಗಿದ್ದು, ಬರೀ ಐದು ಪರ್ಸೆಂಟ್ ಆಲ್ಕೋಹಾಲ್ ಹೊಂದಿರುವ ಬಿಯರ್‌ಗಳ ಗರಿಷ್ಠ ಚಿಲ್ಲರೆ ಬೆಲೆ 20 ರಿಂದ 25ರಷ್ಟು ಕಡಿಮೆಯಾಗಿದೆ.
ಜನಪ್ರಿಯ ಬ್ರ್ಯಾಂಡ್‌ಗಳಾದ ಕಿಂಗ್‌ಫಿಷರ್ ಪ್ರೀಮಿಯಂ, ಕಿಂಗ್‌ಫಿಶರ್ ಅಲ್ಟ್ರಾ, ಬಡ್‌ವೈಸರ್, ಯುಬಿ ಎಕ್ಸ್‌ಪೋರ್ಟ್, ಹೈನಿಕನ್ ಬಾಟಲಿಗಳ ಮೇಲೆ ದರ ಕಡಿಮೆಯಾಗಿದೆ. ಇನ್ನು ಪ್ರೀಮಿಯಂ ಸ್ಕಾಚ್‌ಗಳ ಬೆಲೆಯೂ ಇಳಿಕೆಯಾಗಿದ್ದು, ಮದ್ಯಪ್ರಿಯರು ಖುಷಿಪಟ್ಟಿದ್ದಾರೆ.
ಎಲ್ಲ ಬ್ರ್ಯಾಂಡ್‌ಗಳ ಅಂತಿಮ ಹೊಸ ಎಮ್‌ಆರ್‌ಪಿ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ.



