June 6, 2026
Saturday, June 6, 2026
spot_img

ಪಂಜಾಬ್ ಗೆ ಸ್ಟೋಯ್ನಿಸ್, ಶೆಡ್ಗೆ ಬಲ: ಗುಜರಾತ್ ಗೆಲುವಿಗೆ 164 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಗೆ ಎಡವಿದ ಪಂಜಾಬ್ ಗೆ ಸೂರ್ಯಾಂಶ್ ಶೆಡ್ಗೆ 57 ಹಾಗೂ ಮಾರ್ಕಸ್ ಸ್ಟೋಯ್ನಿಸ್ 40 ರನ್​ಗಳ ಆಟ ಬಲ ತುಂಬಿದ್ದು, ನಿಗದಿತ ಓವರ್ ಗೆ 163 ರನ್​ಗಳ ಸಾಲಿನ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಗೆ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳು ನಿರಾಸೆ ಮೂಡಿಸಿದ್ದು, ಪ್ರಿಯಾಂಶ್ ಆರ್ಯ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಕೂಪರ್ ಕೊನೊಲಿ ಖಾತೆ ತೆರೆಯದೆಯೇ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು.

ನಂತರ ಬಂದ ಪ್ರಭ್​ಸಿಮ್ರನ್ ಸಿಂಗ್ 15 ರನ್ ಗಳಿಸಿ ಔಟಾದರು. ನೆಹಾಲ್ ವಧೇರಾ ಕೂಡ ಶೂನ್ಯಕ್ಕೆ ಕೈ ಕೊಟ್ಟರು.ನಾಯಕ ಶ್ರೇಯಸ್ ಅಯ್ಯರ್ ಕೂಡ 19 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಇತ್ತ ವಿಕೆಟ್ ಉರುಳುತ್ತಿದ್ದರೆ, ಪಂಜಾಬ್ ತಂಡಕ್ಕೆ ಸೂರ್ಯಾಂಶ್ ಶೆಡ್ಗೆ ಅರ್ಧಶತಕ ಸಿಡಿಸಿ ನೆರವಾದರು. ಶೆಡ್ಗೆ 29 ಎಸೆತಗಳಲ್ಲಿ 57 ರನ್ ಗಳಿಸಿದರು. ಮಾರ್ಕಸ್ ಸ್ಟೋಯ್ನಿಸ್ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನ 160ರ ಗಡಿ ದಾಟಿಸಲು ನೆರವಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !