October 15, 2026
Thursday, October 15, 2026
spot_img

ಪಾಕಿಸ್ತಾನದಲ್ಲಿ ವಿಚಿತ್ರ ತೆರಿಗೆ ಪಾಲಿಟಿಕ್ಸ್: ಈಗ ಎಮ್ಮೆ ಸಗಣಿಗೂ ಕೊಡಬೇಕು ಟ್ಯಾಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಆರ್ಥಿಕ ಸಂಕಷ್ಟ ಹೊಸ ಮಜಲಿಗೆ ತಲುಪಿದೆ. ಅಲ್ಲಿನ ಮುಖ್ಯಮಂತ್ರಿ ಮರಿಯಮ್ ನವಾಜ್ ಸರ್ಕಾರವು ಈಗ ಜಾನುವಾರುಗಳ ತ್ಯಾಜ್ಯದ ಮೇಲೆ ಕಣ್ಣಿಟ್ಟಿದ್ದು, ವಿಚಿತ್ರವಾದ ‘ಸಗಣಿ ತೆರಿಗೆ’ಯನ್ನು ಜಾರಿಗೆ ತಂದಿದೆ.

‘ಸುತ್ರಾ ಪಂಜಾಬ್’ (ಸ್ವಚ್ಛ ಪಂಜಾಬ್) ಯೋಜನೆಯಡಿ ಪ್ರತಿ ಎಮ್ಮೆಗೆ ದಿನಕ್ಕೆ 30 ಪಾಕಿಸ್ತಾನಿ ರೂಪಾಯಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.

ಪ್ರಾಂತ್ಯದ ಸುಮಾರು 168 ಜಾನುವಾರು ಕಾಲನಿಗಳಿಂದ ತ್ಯಾಜ್ಯ ಸಂಗ್ರಹಿಸಿ, ಅದನ್ನು ಬಯೋಗ್ಯಾಸ್ ಉತ್ಪಾದನೆಗೆ ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಈಗಾಗಲೇ ಹಣದುಬ್ಬರ ಮತ್ತು ಪಶು ಆಹಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರಿಗೆ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಎಮ್ಮೆಗೆ ವರ್ಷಕ್ಕೆ ಸರಿಸುಮಾರು 11,000 ರೂಪಾಯಿ ತೆರಿಗೆ ಕಟ್ಟಬೇಕಾಗಿರುವುದು ರೈತರನ್ನು ಕಂಗಾಲಾಗಿಸಿದೆ.

Must Read