September 14, 2026
Monday, September 14, 2026
spot_img

T20 Ranking ಪ್ರಕಟ: ಸ್ಮೃತಿ ಮಂಧಾನಗೆ ಶಾಕ್, ಮುಂಬಡ್ತಿ ಪಡೆದ ಶಫಾಲಿ ವರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾದ ಭಾರತ ಮಹಿಳಾ ತಂಡದ ಮೇಲೆ ಇದೀಗ ಐಸಿಸಿ ಟಿ20 ಶ್ರೇಯಾಂಕದಲ್ಲೂ ಪರಿಣಾಮ ಸ್ಪಷ್ಟವಾಗಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಬ್ಯಾಟಿಂಗ್ ವಿಭಾಗದ ದೌರ್ಬಲ್ಯವೇ ಪ್ರಮುಖ ಕಾರಣವಾಗಿದೆ.

ಈ ಹಿನ್ನೆಲೆ ಸ್ಮೃತಿ ಮಂದಾನಾ ಅವರ ಶ್ರೇಯಾಂಕ ಕುಸಿತ ಕಂಡಿದೆ. ಎರಡು ಪಂದ್ಯಗಳಲ್ಲಿ ಕೇವಲ 25 ರನ್ ಗಳಿಸಿದ್ದರಿಂದ ಅವರು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಆದರೆ ಉತ್ತಮ ಫಾರ್ಮ್‌ನಲ್ಲಿ ಇರುವ ಶಫಾಲಿ ವರ್ಮಾ ಅರ್ಧಶತಕದ ನೆರವಿನಿಂದ ಎರಡು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೇರಿದ್ದಾರೆ.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡು ಸ್ಥಾನ ಏರಿಕೆ ಕಂಡು 11ನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಜೆಮಿಮಾ ರೋಡ್ರಿಗಸ್ ನಾಲ್ಕು ಸ್ಥಾನ ಕುಸಿದು 14ನೇ ಸ್ಥಾನಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ:

ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು ಈ ಸರಣಿಯಿಂದ ಲಾಭ ಪಡೆದಿದ್ದಾರೆ. ನಾಯಕಿ ಲಾರಾ ವೋಲ್ವಾರ್ಟ್ ಐದನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅನ್ನೆರಿ ಡರ್ಕ್ಸೆನ್ 18 ಸ್ಥಾನ ಏರಿಕೆ ಕಂಡು 33ನೇ ಸ್ಥಾನಕ್ಕೇರಿದ್ದಾರೆ. ಸುನೆ ಲೂಸ್ ಎಂಟು ಸ್ಥಾನ ಏರಿಕೆ ಕಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಭಾರತಕ್ಕೆ ಹಿನ್ನಡೆ ಎದುರಾಗಿದೆ. ದೀಪ್ತಿ ಶರ್ಮಾ ಐದನೇ ಸ್ಥಾನಕ್ಕೆ ಕುಸಿದರೆ, ರೆಣುಕಾ ಸಿಂಗ್ ಠಾಕೂರ್ ಒಂಬತ್ತನೇ ಸ್ಥಾನಕ್ಕೆ ಇಳಿದಿದ್ದಾರೆ. ಅರುಂಧತಿ ರೆಡ್ಡಿ ಟಾಪ್ 10ರಿಂದ ಹೊರಬಿದ್ದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !