September 22, 2026
Tuesday, September 22, 2026
spot_img

ಟಿ20 ವಿಶ್ವಕಪ್‌ ಫೈನಲ್‌ ಮ್ಯಾಚ್: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್‌ ಗೆದ್ದ ನ್ಯೂಜಿಲೆಂಡ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಆ ಮೂಲಕಭಾರತ ತಂಡಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ಟೀಮ್‌ ಇಂಡಿಯಾ ಇದೀಗ ಮೂರನೇ ಟಿ20 ವಿಶ್ವಕಪ್‌ ಗೆಲ್ಲಲು ಎದುರು ನೋಡುತ್ತಿದ್ದರೆ, ಎದುರಾಳಿ ಕಿವೀಸ್‌ ಚೊಚ್ಚಲ ಚುಟುಕು ವಿಶ್ವಕಪ್‌ ಗೆಲ್ಲುವ ತವಕದಲ್ಲಿದೆ.

ಕಿವೀಸ್ ತಂಡವು ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆ ಮಾಡಿದ್ದು, ಸ್ಪಿನ್ನರ್ ಕೋಲ್ ಮೆಕ್‌ಕೊಂಚಿ ಬದಲಿಗೆ ಜಾಕೋಬ್ ಡಫಿ ಅವರನ್ನು ಸೇರಿಸಿಕೊಂಡಿದೆ. ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಪ್ಲೇಯಿಂಗ್‌ XI
ಭಾರತ: ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ , ಸೂರ್ಯಕುಮಾರ್‌ಯಾದವ್‌ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ/ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್ ಸಿಂಗ್

ನ್ಯೂಜಿಲೆಂಡ್‌: ಟಿಮ್‌ ಸೈಫರ್ಟ್‌ (ವಿಕೆಟ್‌ ಕೀಪರ್‌), ಫಿನ್‌ ಆಲೆನ್‌, ರಚಿನ್‌ ರವೀಂದ್ರ, ಗ್ಲೆನ್‌ ಫಿಲಿಪ್ಸ್‌, ಮಾರ್ಕ್‌ ಚಾಪ್ಮನ್‌, ಡ್ಯಾರಿಲ್‌ ಮಿಚೆಲ್‌, ಜೇಮ್ಸ್‌ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌( ನಾಯಕ), ಜಾಕೋಬ್‌ ಡಫಿ, ಮ್ಯಾಟ್‌ ಹೆನ್ರಿ, ಲಾಕಿ ಫರ್ಗ್ಯೂಸನ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !