March 12, 2026
Thursday, March 12, 2026
spot_img

ಟಿ20 ವಿಶ್ವಕಪ್ | ಇಂಗ್ಲೆಂಡ್ ಸ್ಪಿನ್ ದಾಳಿಗೆ ಎಡವಿದ ಕಿವೀಸ್: ಆಂಗ್ಲರ ಗೆಲುವಿಗೆ ಸಾಧಾರಣ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೂಡಲೇ ಕಿವೀಸ್ ಪಡೆ ಬ್ಯಾಟಿಂಗ್ ಆರಂಭಿಸಿದರು. ಫಿನ್ ಅಲೆನ್ 19 ಎಸೆತಗಳಲ್ಲಿ 29 ರನ್ ಗಳಿಸಿ ವಿಲ್ ಜಾಕ್ಸ್ ಬೌಲಿಂಗ್‌ನಲ್ಲಿ ಬೆಥೆಲ್‌ಗೆ ಕ್ಯಾಚ್ ನೀಡಿದರು. ಕೇವಲ 11 ರನ್ ಗಳಿಸಿ ರೆಹಾನ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಾರ್ಕ್ ಚಾಪ್ಮನ್ (9 ಎಸೆತಗಳಲ್ಲಿ 15) ರೆಹಾನ್‌ಗೆ ಎರಡನೇ ಬಲಿಯಾದರು. ಡ್ಯಾರಿಲ್ ಮಿಚೆಲ್ ಕೇವಲ 3 ರನ್‌ಗಳಿಸಿ ಔಟ್ ಆಗುವ ಮೂಲಕ ಮತ್ತೊಮ್ಮೆ ನಿರಾಶೆ ಮೂಡಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗ್ಲೆನ್ ಫಿಲಿಪ್ಸ್ 28 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 39 ರನ್‌ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಕೋಲ್ ಮೆಕೆಂಜಿ 12 ಎಸೆತಗಳಲ್ಲಿ 14 ರನ್‌ಗಳಿಸಿದರೆ, ಮ್ಯಾಟ್ ಹೆನ್ರಿ ಅಜೇಯ 1, ಮಿಚೆಲ್ ಸ್ಯಾಂಟ್ನರ್ ಅಜೇಯ 9 ರನ್‌ಗಳಿಸಿದರು.

ಇಂಗ್ಲೆಂಡ್ ತಂಡದ ಪರ ಆದಿಲ್ ರಶೀದ್ 28ಕ್ಕೆ2, ವಿಲ್ ಜಾಕ್ಸ್ 23ಕ್ಕೆ2, ರೆಹಾನ್ ಅಹ್ಮದ್ 28ಕ್ಕೆ2, ಲಿಯಾಮ್ ಡಾಸೆನ್ 1 ವಿಕೆಟ್ ಪಡೆದು ಮಿಂಚಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !