September 25, 2026
Friday, September 25, 2026
spot_img

ಟಿ20 ವಿಶ್ವಕಪ್‌ | ಸೂಪರ್‌-8ಕ್ಕೆ ಪಾಕಿಸ್ತಾನ ಎಂಟ್ರಿ, ನಮೀಬಿಯಾ, ಯುಎಸ್‌ಎ ಟೂರ್ನಿಯಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: :

ಟಿ20 ವಿಶ್ವಕಪ್‌ ನಲ್ಲಿ ನಮೀಬಿಯಾ ವಿರುದ್ಧ ಫರ್ಹಾನ್‌ ಶತಕದಾಟ, ಉಸ್ಮಾನ್‌ ತಾರಿಖ್‌ ಮತ್ತು ಶದಾಬ್‌ ಖಾನ್‌ ಅವರ ಸ್ಪಿನ್‌ ಮೋಡಿಗೆ ಪಾಕಿಸ್ತಾನ ಗೆಲುವು ದಾಖಲಿಸಿದ್ದು, ಈ ಮೂಲಕ ಸೂಪರ್‌-8ರ ಹಂತಕ್ಕೆ ಪ್ರವೇಶ ಪಡೆಯಿತು.

ಇತ್ತ ಯುಎಸ್‌ಎ, ನಮೀಬಿಯಾ ತಂಡ ಅಧಿಕೃತವಾಗಿ ಚುಟುಕು ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆಯಿತು.

ಪಾಕಿಸ್ತಾನ ತಂಡ ನೀಡಿದ್ದ 200 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ತಂಡ, 17.3 ಓವರ್‌ಗಳಿಗೆ 97 ರನ್‌ಗಳಿಗೆ ಆಲ್‌ಔಟ್‌ ಆಯಿತು. ನಮೀಬಿಯಾ ಪರ ಲಾರೆನ್‌ ಸ್ಟೀನ್‌ಕಾಂಪ್‌ 23 ರನ್‌ ಹಾಗೂ ಅಲೆಕ್ಸಾಂಡರ್ ವೋಲ್ಕೆನ್ 20 ರನ್‌ ಗಳಿಸಿದ್ದು,ಬಿಟ್ಟರೆ ಇನ್ನಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ 20 ರನ್‌ ದಾಟಲಿಲ್ಲ. ಪಾಕಿಸ್ತಾನ ಪರ ಉಸ್ಮಾನ್‌ ತಾರಿಖ್‌ 4 ವಿಕೆಟ್‌ ಕಿತ್ತರೆ, ಶದಾಬ್‌ ಖಾನ್‌ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ತಂಡ, ಸಾಹಿಬ್‌ಝಾದ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳನ್ನು ಕಲೆ ಹಾಕಿತ್ತು.

Must Read