March 12, 2026
Thursday, March 12, 2026
spot_img

ಟಿ20 ವಿಶ್ವಕಪ್‌ | ಸ್ಟ್ರಾಂಗ್ ಆಸ್ಟ್ರೇಲಿಯಾ ವೀಕ್ ಆಯ್ತು: ಜಿಂಬಾಬ್ವೆ ಮುಂದೆ ಮಂಡಿಯೂರಿದ ಆಸೀಸ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂದಿದ್ದು, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಜಿಂಬಾಬ್ವೆ ಸೋಲಿಸಿ ಗಮನ ಸೆಳೆದಿದೆ.

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬಹುತೇಕರು ಆಸ್ಟ್ರೇಲಿಯಾ ಸುಲಭವಾಗಿ ಗೆಲ್ಲಲಿದೆ ಎಂದು ಊಹಿಸಿದ್ದರು. ಆದರೆ ಜಿಂಬಾಬ್ವೆ ಆಟಗಾರರು ಅದ್ಭುತ ಪ್ರದರ್ಶನ ನೀಡಿ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದರು.

ಇದನ್ನೂ ಓದಿ:

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಟ್ಟಿತು. ಆರಂಭದಿಂದಲೇ ಸಮತೋಲನದ ಆಟವಾಡಿದ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸವಾಲು ಎಸೆದರು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಒತ್ತಡಕ್ಕೆ ಒಳಗಾಯಿತು. ಜಿಂಬಾಬ್ವೆ ಬೌಲರ್‌ಗಳ ನಿಯಂತ್ರಿತ ದಾಳಿ ಮತ್ತು ಚುರುಕಿನ ಫೀಲ್ಡಿಂಗ್‌ನಿಂದ ರನ್ ಗಳಿಸುವುದು ಕಷ್ಟವಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ 146 ರನ್‌ಗಳಿಗೆ ಸೀಮಿತವಾಗಿ 23 ರನ್‌ಗಳಿಂದ ಸೋಲನುಭವಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !