September 29, 2026
Tuesday, September 29, 2026
spot_img

ಕ್ರಿಕೆಟ್ ಬಾಲ್ ಎಂದು ಬ್ಯಾಟ್ ಬೀಸಿದ ಬಾಲಕ: ಆಮೇಲೇನಾಯ್ತು ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಆಟದ ಸಾಮಗ್ರಿ ಎಂದು ಭಾವಿಸಿ ಸ್ಫೋಟಕದೊಂದಿಗೆ ಆಟವಾಡುತ್ತಿದ್ದ ಬಾಲಕನೊಬ್ಬ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಮನೆಯ ಅಂಗಳದಲ್ಲಿ ಸಿಕ್ಕ ಚೆಂಡಿನಾಕಾರದ ವಸ್ತುವನ್ನು ಮಕ್ಕಳು ಕ್ರಿಕೆಟ್ ಆಡಲು ಬಳಸಿದ್ದಾರೆ. ಒಬ್ಬ ಬಾಲಕ ಅದನ್ನು ಎಸೆದಾಗ, ಅಭೀಶ್ ಎಂಬಾತ ಬ್ಯಾಟ್‌ನಿಂದ ಜೋರಾಗಿ ಹೊಡೆದಿದ್ದಾನೆ. ತಕ್ಷಣವೇ ಆ ವಸ್ತು ಭೀಕರವಾಗಿ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಅಭೀಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾದ ಆತನನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಡುಹಂದಿಗಳ ಬೇಟೆಗಾಗಿ ಕಿಡಿಗೇಡಿಗಳು ಇರಿಸಿದ್ದ ನಾಡಬಾಂಬ್ ಇದಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸ್ಫೋಟಕಗಳ ಕಾಯ್ದೆ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read