April 19, 2026
Sunday, April 19, 2026
spot_img

DAILY MOTIVATION | ಕಲರ್‌ಫುಲ್‌ ನವಿಲು ಪಂಜರದಲ್ಲಿದೆ, ಕಪ್ಪು ಕಾಗೆ ಫ್ರೀಯಾಗಿ ಹಾರಾಡ್ತಾ ಇದೆ

ಕಾಗೆಯೊಂದು ಆಕಾಶದಲ್ಲಿ ಹಾರಾಡ್ತಾ ಇತ್ತಂತೆ, ಈ ವೇಳೆ ಇತರ ಪಕ್ಷಿಗಳು ಕಾಗೆಯ ಪಕ್ಕ ಹಾರಿ ಹೋಗಿವೆ. ಈ ಪಕ್ಷಿಗಳೆಲ್ಲ ಎಷ್ಟು ಬ್ಯೂಟಿಫುಲ್‌ ಆಗಿ ಇದೆ ಅಲ್ವಾ ಎಂದುಕೊಂಡು ಕಾಗೆ ಮುಂದುವರಿದಿದೆ.

ಹಾರಾಡಿ ಹಾರಾಡಿ ಸುಸ್ತಾದ ನಂತರ ಕಾಗೆಗೆ ಬಾಯಾರಿಕೆ ಆಗಿದೆ. ವಲ್ಪ ದೂರದಲ್ಲಿ ಕಾಣ್ತಿದ್ದ ಕೆರೆಯ ಬಳಿ ಕಾಗೆ ಬಂದು ನೀರು ಕುಗಿಯೋಕೆ ಬಗ್ಗಿತ್ತು. ಆಗ ತನ್ನದೇ ಪ್ರತಿಬಿಂಬ ಕಂಡು ಶಾಕ್‌ ಆಯ್ತು. ಅಯ್ಯೋ ದೇವ್ರೆ ನಾನ್ಯಾಕೆ ಇಷ್ಟು ಕೆಟ್ಟದಾಗಿ ಇದ್ದೀನಿ? ನನ್ನ ಕಣ್ಣು ನೋಡು, ನನ್ನ ಬಣ್ಣ ನೋಡು, ಥೂ ಇದೆಂಥ ಜೀವನ ಎಂದು ಬೇಸರ ಮಾಡಿಕೊಳ್ತು.

ಜೀವನದಲ್ಲಿ ಉತ್ಸಾಹವೇ ಇಲ್ಲದಂತೆ ಓಡಾಡ್ತಿದ್ದ ಕಾಗೆಗೆ ನವಿಲೊಂದು ಕಾಣಿಸಿತು. ನವಿಲಿನ ಅಂದ ನೋಡಿ, ಅದರ ವಯ್ಯಾರ ನೋಡಿ ಕಾಗೆಗೆ ಹೊಟ್ಟೆಉರಿಯಾಯ್ತು. ಒಂದೇ ಭೂಮಿ ಮೇಲಿರೋ ನಮ್ಮಲ್ಲಿ ಇಷ್ಟೊಂದು ಬೇಧಭಾವ ಯಾಕೆ? ನಾನು ಹೀಗಿದ್ದೀನಿ, ನವಿಲು ಎಷ್ಟು ಚೆನ್ನಾಗಿದೆ ಎಂದು ಮೇಲೆ ನೋಡುತ್ತಾ ಹೇಳುತ್ತಿತ್ತು. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬ ನವಿಲನ್ನು ಹಿಡಿದುಕೊಂಡು ಪಂಜರಕ್ಕೆ ಹಾಕಿದ. ಗರಿಬಿಚ್ಚಿ ಕುಡಿಯುತ್ತಿದ್ದ ನವಿಲು ಸ್ವಲ್ಪ ದಿನದಲ್ಲಿ ಝೂನಲ್ಲಿ ಇತ್ತು.

ಕೊಟ್ಟಿದ್ದನ್ನು ತಿನ್ನುತ್ತಾ, ಅದದೇ ಜನಗಳನ್ನು ನೋಡುತ್ತಾ ನವಿಲು ದುಃಖಿಸುತ್ತಿತ್ತು. ಮನಬಂದಾಗ ಹಾರೋಕಾಗಲ್ಲ. ಗರಿಬಿಚ್ಚಿ ಕುಣಿದರೆ ನೂರಾರು ಜನ ಬಂದು ಸೇರ್ತಾರೆ. ಇದೆಂಥಾ ಜೀವನ ಎಂದು ನವಿಲು ಕಣ್ಣೀರಿಡುತ್ತಿತ್ತು. ನವಿಲನ್ನು ಕಂಡ ಕಾಗೆ ನಾನೆಷ್ಟು ಅದೃಷ್ಟವಂತ. ನನಗೆ ಫ್ರೀಡಂ ಇದೆ ಎನ್ನುತ್ತಾ ಖುಷಿಯಾಗಿ ಜೀವನ ಸಾಗಿಸಿತು..

ನಮಗಿಂತ ಮೇಲೆ ಎಂದುಕೊಂಡ ಎಷ್ಟೋ ಜನರಿಗೆ ನೂರಾರು ಕಷ್ಟಗಳಿರುತ್ತವೆ, ಅವರದ್ದೇ ಆದ ಸಮಸ್ಯೆಗಳಿರುತ್ತವೆ. ದೇವರು ಕೊಟ್ಟ ಬಾಳನ್ನು ನಗುತ್ತಾ ಬಾಳುವುದು ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !