May 12, 2026
Tuesday, May 12, 2026
spot_img

ಪ್ರಧಾನಿಯ ಹೇಳಿಕೆ ಒಂದು ರೀತಿ ಭಯ ಮೂಡಿಸಿದೆ: ಶಾಸಕ ಯಶವಂತರಾಯಗೌಡ ಪಾಟೀಲ

ಹೊಸದಿಗಂತ ವರದಿ ವಿಜಯಪುರ:

ದೇಶ ಆಳಲು ಬಾರದವರು ವಿಶ್ವಗುರುವೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಕ್ರೊಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಂಡು ರಾಜ್ಯವನ್ನು ಆಳುವ ಪ್ರಯತ್ನ ನಡೆಯುತ್ತಿದೆ, ಐಟಿ- ಇಡಿಗಳ ದುರಪಯೋಗ ಆದರೆ ದೇಶ ಎತ್ತ ಸಾಗಬೇಕು? ದೇಶವನ್ನು ಆಳಲು ಸಾಧ್ಯವಾಗದವರು ವಿಶ್ವ ಗುರು ಆಗಲು ಸಾಧ್ಯವೇ?, ದೇಶವನ್ನು ಮುನ್ನಡೆಸುವವರು ವಿವೇಕದಿಂದ ಹೇಳಿಕೆ ನೀಡಬೇಕು, ಈ ಹಿಂದೆ ನೋಟು ಅಮಾನ್ಯೀಕರಣವನ್ನು ಸಹ ತರಾತುರಿಯಲ್ಲಿ ಮೋದಿ ಕೈಗೊಂಡಿದ್ದರು. ಪ್ರಧಾನಮಂತ್ರಿಗಳ ಕಚೇರಿ ಚುನಾವಣೆ ಕೇಂದ್ರಿತವಾಗಬಾರದು, ಚುನಾವಣಾ ಆಯೋಗಕ್ಕೆ ಜೀವವೇ ಇಲ್ಲದಂತಾಗಿದೆ ಎಂದರು.

ಇದನ್ನೂ ಓದಿ:

ಪ್ರಧಾನಮಂತ್ರಿಗಳು ಎರಡು ದಿನಗಳಿಂದ ನೀಡುತ್ತಿರುವ ಹೇಳಿಕೆ ಅಪಹಾಸ್ಯಕ್ಕೆ ಗುರಿಯಾಗಿವೆ, ಮುಖ್ಯಮಂತ್ರಿಗಳ ಕಾದಾಟದ ಬಗ್ಗೆ ಮಾತನಾಡುವುದು ಪ್ರಧಾನಿಗೆ ಶೋಭೆ ತರುವ ವಿಷಯವಿಲ್ಲ, ಅವರ ಹೇಳಿಕೆಯಿಂದ ಜನರಲ್ಲಿ ಅಭದ್ರತೆ ಕಾಡುತ್ತಿದೆ, ಚಿನ್ನ ಖರೀದಿಸಬೇಡಿ, ನಡೆದುಕೊಂಡು ಹೋಗಿ ಎಂದು ಹೇಳುವ ಮೂಲಕ ಒಂದು ರೀತಿ ಭಯ ಮೂಡಿಸಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !